ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ರಾಣೆಬೆನ್ನೂರಿನ ಚಂದ್ರಗುತ್ಯಮ್ಮ ಸೇವಾ ಸಮಿತಿಯ 125 ಭಕ್ತರು ಕಾಲ್ನಡಿಗೆ ಮೂಲಕ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಶ್ರೀ ರೇಣುಕಾಂಬ ದೇವಾಲಯಕ್ಕೆ Shri Renukamba Temple ಆಗಮಿಸಿದರು.
ಜುಲೈ 7 ರಂದು ರಾಣೆಬೆನ್ನೂರು ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಹೊರಟ ಭಕ್ತರ ಪಾದಯಾತ್ರೆಯು ಹಿರೇಕೆರೂರು, ಶಿರಾಳಕೊಪ್ಪ, ಸೊರಬ ಮಾರ್ಗವಾಗಿ ಜುಲೈ 9ರಂದು ಚಂದ್ರಗುತ್ತಿ ಶ್ರೀ ಕ್ಷೇತ್ರ ತಲುಪಿತು.

ಪ್ರತಿ ವರ್ಷವೂ ಶ್ರಾವಣ ಮಾಸಕ್ಕೆ ಬರುವ ರಾಣೆಬೆನ್ನೂರಿನ ಶ್ರೀ ಚಂದ್ರಗುತ್ಯಮ್ಮ ಸೇವಾ ಸಮಿತಿ ಭಕ್ತರು ಈ ಬಾರಿ ಅಧಿಕ ಮಾಸಕ್ಕೆ ಆಗಮಿಸಿದ್ದು ವಿಶೇಷವಾಗಿದೆ.
ರಾಣೆಬೆನ್ನೂರಿನಿಂದ 125 ಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದು. ಶುಕ್ರವಾರದಂದು ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದರು, ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ಶ್ರೀ ರೇಣುಕಾಂಬ ದೇವಸ್ಥಾನದ ಕಲ್ಯಾಣ ಮಂಟಪ ಆವರಣದಲ್ಲಿ ಚಂದ್ರಗುತ್ಯಮ್ಮ ಸೇವಾ ಸಮಿತಿ ವತಿಯಿಂದ ಅನ್ನದಾಸೋಹ ಸೇವೆ ನಡೆಸಿದರು.


ನಾಡಿನ ಸಮಸ್ತರಿಗೂ ಶ್ರೀ ರೇಣುಕಾಂಬ ದೇವಿ ಸುಖ, ಶಾಂತಿ, ಮತ್ತು ಆರೋಗ್ಯ, ಆಯಸ್ಸು ನೀಡಲಿ ಎನ್ನುವ ಮನೋಭಾವನೆಯಿಂದ ರಾಣೆಬೆನ್ನೂರು ಚಂದ್ರಗುತ್ಯಮ್ಮ ಸೇವಾ ಸಮಿತಿಯ ಭಕ್ತರು ಕಳೆದ 10 ವರ್ಷಗಳಿಂದಲೂ ಪಾದಯಾತ್ರೆ ಮೂಲಕ ಶ್ರೀ ರೇಣುಕಾಂಬ ದೇಗುಲಕ್ಕೆ ಆಗಮಿಸುತ್ತಿದ್ದೇವೆ.
ರಾಕೇಶ್ ರಾಣೆಬೆನ್ನೂರು ಚಂದ್ರಗುತ್ಯಮ್ಮ ಸೇವಾ ಸಮಿತಿ ಕಾರ್ಯದರ್ಶಿ
ಸಂಘಟನೆಯ ಸಂಸ್ಥಾಪಕ ಹನುಮಂತಪ್ಪ, ಗೌರವ ಅಧ್ಯಕ್ಷ ಬೀರಪ್ಪ, ಸಮಿತಿಯ ಅಧ್ಯಕ್ಷ ನಾಗಪ್ಪ, ಕಾರ್ಯದರ್ಶಿ ರಾಕೇಶ್, ಉಪಾಧ್ಯಕ್ಷ ನಾಗರಾಜ್, ಖಜಾಂಚಿ ಮಂಜು ಗೌಡ್ರು, ಸಂಘಟನಾಕಾರ್ಯದರ್ಶಿ ನಿಂಗಪ್ಪ, ಸೇರಿದಂತೆ ಸೇವಾ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















