ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿಗೆ ಇತಿಹಾಸವಿದ್ದು, ದೇಶೀ ಕ್ರೀಡೆಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಸ್. ಮಧು ಬಂಗಾರಪ್ಪ Madhu Bangarappa ಹೇಳಿದರು.
ಚಂದ್ರಗುತ್ತಿ ಸಮೀಪದ ತೆಲಗುಂದ್ಲಿ ಗ್ರಾಮದಲ್ಲಿ ಶ್ರೀ ಮಾರಿಕಾಂಬ ದೇವಿಯ ಕಾರ್ತಿಕೋತ್ಸವದ ಅಂಗವಾಗಿ ಶ್ರೀ ಮಾರಿಕಾಂಬ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ ಹೊನಲು ಬೆಳಕಿನ ಪ್ರೊ ಕಬ್ಬಡ್ಡಿ ಲೀಗ್ ಪಂದ್ಯಾವಳಿಯ ಅಂಕಣ ಉದ್ಘಾಟನೆ ನೆರವೇರಿಸಿ ಅವರು ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.
ವೇದಿಕೆ ಉದ್ಘಾಟನೆ ನೆರವೇರಿಸಿದ ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿ, ಗ್ರಾಮೀಣ ಕ್ರೀಡೆ ಕಬಡ್ಡಿಯೂ ಇಷ್ಟು ಎತ್ತರಕ್ಕೆ ಬೆಳೆದು ತೆಲುಗುಂದ್ಲಿ ಅಂತಹ ಗ್ರಾಮದಲ್ಲಿ ಪ್ರೊ ಕಬ್ಬಡ್ಡಿ ಏರ್ಪಡಿಸಿದ್ದು ಕಬಡ್ಡಿ ಪ್ರಿಯರು ಹೆಮ್ಮೆಪಡುವಂಥದ್ದು. ಈ ಒಂದು ಕ್ರೀಡೆಗೆ ದಾನಿಗಳು ಹೆಚ್ಚಾಗಿ ಸಹಕಾರ ನೀಡಿದ್ದು ಅದರಿಂದಾಗಿ ಪ್ರೊ ಕಬಡ್ಡಿ ಅಂತಹ ಪಂದ್ಯಾವಳಿಯನ್ನು ಯುವಕರು ಆಯೋಜಿಸಿದ್ದಾರೆ ಎಂದರು.
ಹರ್ಷೋದ್ಧಾರ ಹಾಗೂ ವೈಭವದ ಹೊನಲು ಬೆಳಕಿನ ಮಧ್ಯ ನಡೆದ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಗ್ರಾಮ ಸೇರಿದಂತೆ ನೆರೆಯ ತಾಲೂಕು ವಿವಿಧ ಭಾಗಗಳಿಂದ ಕಬಡ್ಡಿ ಅಭಿಮಾನಿಗಳು ಸುಮಾರು 8000 ರಷ್ಟು ಆಗಮಿಸಿದ್ದರು. ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಕಬಡ್ಡಿ ಆಡಿ ಬಲ ಪ್ರದರ್ಶಿಸಿದರೆ ಇತ್ತ ನೆರೆದವರಿಂದ ಕೆಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿ ಕೇಳಿ ಬಂದಿತು.
Also read: ಡಿ.23ರಂದು ಶಿವಮೊಗ್ಗ ತಾಲ್ಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಅಚಿಂತ್ಯಾ ಆಯ್ಕೆ
ಬಹುಮಾನ:
1 ಲಕ್ಷ ರೂ., ಪ್ರಥಮ ಬಹುಮಾನವನ್ನು ಎಸ್.ಎಮ್ ಟಿ. ವಾರಿಯಸ್ ತೆಲುಗುಂದ್ಲಿ ತಂಡ, ದ್ವಿತೀಯ ಬಹುಮಾನ 50,000 ರೂ., ಶ್ರೀ ಮಾರಿಕಾಂಬ ಹಂಟರ್ಸ್ ಹಸುವಂತೆ ತಂಡ, 10,000 ರೂ., ತೃತೀಯ ಸ್ಥಾನವನ್ನು ತುಳಸಿ ಕ್ಯಾಪಿಟಲ್ ತೆಲುಗುಂದ್ಲಿ ತಂಡ, 10,000 ರೂ., ಚತುರ್ಥ ಬಹುಮಾನವನ್ನು ಗೇಮ್ ಚೇಂಜಸ್ ತೆಲುಗುಂದ್ಲಿ ತಂಡದವರು ಪಡೆದರು,
ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್. ಮಂಜಪ್ಪ, ಹರೀಶಿ ಗ್ರಾಪಂ ಸದಸ್ಯರಾದ ಕೆ.ಟಿ. ರಾಕೇಶ್, ಜೈಲಕ್ಷ್ಮಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಶಿವಾನಂದ್, ಪ್ರಮುಖರಾದ ಸದಾಶಿವಪ್ಪ, ಸುನಿಲ್, ಶಿವಾನಂದ್, ಶ್ರೀಧರ್, ಮಧುPರ್, ಕೇಶವ್, ಧರ್ಮೇಂದ್ರ, ಚಂದ್ರಶೇಖರ್ ಗೌಡ, ಚಂದ್ರಪ್ಪ ಬಡಗಿ, ಮೋಹನ್ ಬಡಿಗಿ ಸೇರಿದಂತೆ ಮತ್ತಿತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post