ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇಗುಲಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದಂತಹ ವಸ್ತುಗಳನ್ನು ದೇವಸ್ಥಾನದ ಕಲ್ಯಾಣ ಮಂಟಪದ ಆವರಣದಲ್ಲಿ ಚಂದ್ರಗುತ್ತಿ ಪ್ರಭಾರ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣ ಅಧಿಕಾರಿಯಾದ ವಿ.ಎಲ್. ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಬುಧವಾರ ಬಹಿರಂಗ ಹರಾಜು ಮಾಡಲಾಯಿತು.
ಹರಾಜಿನಿಂದ 5 ಲಕ್ಷದ 20 ಸಾವಿರದ 193 ರೂ. ಆದಾಯ ದೊರಕಿದೆ. ಅಕ್ಕಿ, ಬೆಲ್ಲ, ತೆಂಗಿನಕಾಯಿ, ಒಣಕೊಬ್ಬರಿ, ಸಕ್ಕರೆ, ಅಡಿಗೆ ಎಣ್ಣೆ, ದೀಪದ ಎಣ್ಣೆ, ಅಡಿಕೆಯನ್ನು ಹರಾಜು ಮಾಡಿದರು.













Discussion about this post