ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಪ್ರಾಚೀನ ಕಾಲದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಕ್ಷೇತ್ರವಾದ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಾಲಯದಲ್ಲಿ ಧನುರ್ಮಾಸದ ಪ್ರಯುಕ್ತವಾಗಿ ಒಂದು ತಿಂಗಳ ಕಾಲ ಪ್ರತಿನಿತ್ಯ ಬೆಳಗಿನ ವೇಳೆ ಪೂಜೆ ಪುನಸ್ಕಾರಗಳು ನಡೆದು ಬಂದಿದ್ದು, ಧನುರ್ಮಾಸದ ಕೊನೆಯ ದಿನವಾದ ಭಾನುವಾರ ಸಂಕ್ರಮಣದಂದು ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು.
ಬೆಳಗಿನ ವೇಳೆ 6:30ಕ್ಕೆ ಭಕ್ತರು ಶ್ರೀ ರೇಣುಕಾಂಬ ದೇವಿಯ ಸನ್ನಿಧಿಯಲ್ಲಿ ಚಂದ್ರಗುತ್ತಿ ಸೇರಿದಂತೆ ಸುತ್ತಲಿನ ಗ್ರಾಮದ ಅನೇಕ ಭಕ್ತಾಧಿಗಳು ಮಕರ ಸಂಕ್ರಮಣದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ರೇಣುಕಾ ದೇವಿಯ ದರ್ಶನ ಪಡೆದರು. ಧನುರ್ಮಾಸದ ನಿಮಿತ್ತ ದೇಗುಲದಲ್ಲಿ ವೈಶಿಷ್ಟವಾಗಿ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು, ಬಂದಂತ ಸಾವಿರಾರು ಭಕ್ತರಿಗೆ ಲಡ್ಡು ಪ್ರಸಾದ ಸಂಕ್ರಾಂತಿ ಕಾಳುಗಳನ್ನು ವಿತರಿಸಲಾಯಿತು.
Also read: ಸನಾತನ ಸಂಸ್ಕೃತಿಯನ್ನು ಮುನ್ನಡೆಸುವುದು ಯುವಸಮೂಹದ ಜವಾಬ್ಧಾರಿ
ತಾಯಿ ರೇಣುಕಾಂಬ ದೇವಿಯ ಕೃಪಾಶೀರ್ವಾದ ಸರ್ವರಿಗೂ ಸಲ್ಲಲಿ, ಕೃಷಿಕರಿಗೆ ಮಳೆ, ಬೆಳೆ ಉತ್ತಮ ರೀತಿಯಲ್ಲಿ ದೊರಕಲಿ, ಯಾರಿಗೂ ರೋಗ ರುಜನಗಳು ಬರದಂತೆ ತಾಯಿ ಕಾಪಾಡಲಿ, ಎಲ್ಲರಿಗೂ ಮಕರ ಸಂಕ್ರಮಣದ ಶುಭಾಶಯಗಳು
ವಿ.ಎಲ್ ಶಿವಪ್ರಸಾದ್ ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ.
ಶ್ರೀ ರೇಣುಕಾಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಸದಸ್ಯರಾದ ಪ್ರವೀಣ್ ಮಿರ್ಜಿ, ಶಿವಶಂಕರ ಗೌಡ್ರು, ಲಲಿತ ಎಂ.ಶೆಟ್ಟಿ, ದೇವಸ್ಥಾನದ ಕಾರ್ಯನಿರ್ವಹಣ ಅಧಿಕಾರಿ ವಿ.ಎಲ್. ಶಿವಪ್ರಸಾದ್, ಪಾಲ್ಗೊಂಡಿದ್ದರು,
ಗ್ರಾಮಗಳ ಮನೆ ಬಾಗಿಲುಗಳಲ್ಲಿ ಮಹಿಳೆಯರು ಅಂಗಳ ಬಳಿದು ಬಣ್ಣ ಬಣ್ಣದ ರಂಗೋಲಿಗಳನ್ನು ಚಿತ್ರ ಬಿಡಿಸುವ ಮೂಲಕ ಮಕರ ಸಂಕ್ರಮಣದ ಶುಭಾಶಯಗಳು ಕೋರಿದರು, ಸಂಜೆಯ ವೇಳೆ ಸಣ್ಣ ಪುಟ್ಟ ಪುಟಾಣಿ ಮಕ್ಕಳು ಹೆಣ್ಣು ಮಕ್ಕಳು ಸೀರೆಯನ್ನು ಉಟ್ಟು ತಮ್ಮ ಅಕ್ಕ ಪಕ್ಕದ ಹಿರಿಯರಿಗೆ ಎಳ್ಳು ಬೆಲ್ಲ ಸಂಕ್ರಾಂತಿ ಕಾಳುಗಳನ್ನು ಕೊಡುವುದರ ಮೂಲಕ ಹಿರಿಯರ ಆಶೀರ್ವಾದ ಪಡೆದು ಸಂಭ್ರಮಿಸಿದರು. ಹಳ್ಳಿಯ ಭಾಗದ ರೈತರಿಗೆ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post