ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಚಂದ್ರಗುತ್ತಿ ಭಾಗದಲ್ಲಿ ಈಚೆಗೆ ಕಾಡುಕೋಣಗಳು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿವೆ. ಬಾಡದಬೈಲು ಸಮೀಪ ಈಚೆಗಷ್ಟೆ ಕೃಷಿ ಹೊಂಡದಲ್ಲಿ ಒಂದು ಕೋಣ, ಇದೀಗ ಮಣ್ಣತ್ತಿ, ಕುಂದುಗೋಡಿನಲ್ಲಿ ಎರಡು ಕೋಣ ಸಾವನ್ನಪ್ಪಿವೆ.
ನರ್ಚಿ, ಕುಂದಗೋಡು ಕೋಣ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿವೆ ಎಂದು ಕೇಳಿ ಬಂದಿವೆ. ಮರಣೋತ್ತರ ಪರೀಕ್ಷೆ ನಡೆದಿದೆ ಎನ್ನಲಾಗಿದ್ದು, ಪೂರ್ಣ ವಿವರ ಬರಬೇಕಿದೆ.
Also read: ಅಂತಾರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆ: ಮಾ.10ರಂದು ಫೆಮಥಾನ್ ಕಾರ್ಯಕ್ರಮ
ಕಾಡು ಒತ್ತೂವರಿ ಕಾರಣದಿಂದ ಒಂದೆಡೆ ತಮ್ಮ ಮೂಲ ನಡೆಯನ್ನು ಕಳೆದುಕೊಂಡು ದಿಕ್ಕುತಪ್ಪುವ ಜೊತೆಗೆ ಕಾಡಂಚಿನ ನೀರಿನ ಆಸರೆ ಬಯಸಿ ಬರುವುದು ಸಹಜ. ಆದರೆ, ಇಲ್ಲಿಯವರೆಗೂ ಅವುಗಳಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಬಗ್ಗೆ ಆಡಳಿತಗಳು ಕಿಂಚಿತ್ತೂ ಗಮನಹರಿಸದ ಕಾರಣ ಕಾಡುಕೋಣಗಳು, ಕೆಲವು ವರ್ಷದ ಹಿಂದೆ ಆನೆ, ಲೆಕ್ಕವಿಲ್ಲದಷ್ಟು ಜಿಂಕೆ, ಬರ್ಕ, ಮುಳ್ಳು ಹಂದಿ, ಚಿಪ್ಪು ಹಂದಿ ಹತ್ಯೆಗೊಳಗಾಗುತ್ತಿರುವುದು ಆತಂಕದ ಸಂಗತಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















