ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಸರ್ಕಾರವೆ ನಮ್ಮ ಅವಶ್ಯಕತೆಗಳ ಪೂರೈಕೆಗಳಿಗೆ ಮುಂದಾಗಲಿ ಎಂಬ ಧೋರಣೆ ಬಿಟ್ಟು ಈ ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯವೇನು ಅರಿತು ಸೇವಾ ಮನೋಭಾವ ಬೆಳೆಸಿಕೊಂಡರೆ ಎಲ್ಲರೂ ಕ್ಷೇಮವಾಗಿ ಇರಲು ಸಾಧ್ಯ ಎಂಬುದನ್ನು ಗ್ರಾಮಸ್ಥರು, ಕೆಲ ಸಂಘಟನೆಯವರು ನಿರೂಪಿಸಿರುವ ಉದಾಹರಣೆ ಚಂದ್ರಗುತ್ತಿ ಹೋಬಳಿ ಕೆರೆಮನೆ ಗ್ರಾಮದಲ್ಲಿ ಕಂಡುಬಂದಿದೆ. ಈ ಗ್ರಾಮದ ಸರ್ವ ಋತುಗಳಲ್ಲಿ ನೀರು ಕಾಯ್ದುಕೊಳ್ಳುವ ಕೆರೆಯೊಂದರ ಸ್ವಚ್ಚತಾ ಕಾರ್ಯ ನಡೆಸಿ ಮರುಕಾಯಕಲ್ಪಕ್ಕೆ ಮುಂದಾದರು.
ಈ ವೇಳೆ ಜೀವವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಭೇಟಿ ನೀಡಿ ಸ್ವಸೇವೆಗೆ ಮೆಚ್ಚುಗೆ ಸೂಚಿಸಿ ಕೆರೆ ಏರಿಯ ಮೇಲಿನ ಮರಗಳನ್ನು ಉಳಿಸಿಕೊಂಡು ಸ್ವಚ್ಛಗೊಳಿಸುವುದು ಸೂಕ್ತ, ಮರ ತೆಗೆದರೆ ಅದರ ನಿರ್ಜೀವ ಬೇರು ಕೆರೆಯ ಏರಿಯನ್ನು ಶಿಥಿಲಗೊಳಿಸುತ್ತದೆ. ವೃಕ್ಷ ಉಳಿಸುವ ಮೂಲಕ ಕೆರೆಯ ತೇವಾಂಶ ವನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂದರು.
ರಾಸ್ವಸೇ, ವಾಲ್ಮೀಕಿ ಸಂಘ, ಶಿವಾಜಿ ಬಳಗ, ಭಜರಂಗದಳ, ನಮೋ ಬ್ರಿಗೇಡ್ ಸಂಘಟಕರು, ಕೆರೆಮನೆ, ಹರೀಶಿ ಗ್ರಾಮಸ್ಥರು ಸ್ವಚ್ಛತಾಸೇವೆಯಲ್ಲಿ ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post