ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಕರ್ನಾಟಕ ಚಲನಚಿತ್ರ ಮತ್ತು ಕಿರುಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಹಾಗೂ ಚೇತನ ಫೌಂಡೇಷನ್ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಮಾರ್ಚ 17, 18 ಮತ್ತು 19 ಶುಕ್ರವಾರದಿಂದ ರವಿವಾರದವರೆಗೆ ಧಾರವಾಡದ ರಂಗಾಯಣದಲ್ಲಿ ಕರ್ನಾಟಕ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು ಖ್ಯಾತ ಚಲನಚಿತ್ರ ನಟ ನಟಿಯರು ಭಾಗವಹಿಸುತ್ತಿದ್ದಾರೆ.
ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ಮುಂತಾದ ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಭಾ ಶೋಧ, ಹೊಸ ಚಿತ್ರಗಳ ಪ್ರೋಮೋಷನ್, ಬಿಡುಗಡೆ ಸೇರಿದಂತೆ ವಿಭಿನ್ನ ರೀತಿಯ ಕಾರ್ಯಕ್ರಮಗಳು ಜರುಗುವವು.
ಕಲಾಪೋಷಕರಮಠ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿಯವರು ಸಾನಿಧ್ಯ ವಹಿಸುವರು. ಜನಪ್ರಿಯ ಯುವ ನಾಯಕರು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ) ಕಾರ್ಯದರ್ಶಿ ಮಂಜುನಾಥ ಹಗೇದಾರ ಚಿತ್ರೋತ್ಸವವನ್ನು ಉದ್ಘಾಟನೆ ನೆರವೇರಿಸಲಿದ್ದು , ಸುರೇಶ ಹೆಬ್ಳೀಕರ್, ಪಲ್ಲಕ್ಕಿ ರಾಧಾಕೃಷ್ಣ, ವಿ ನಾಗೇಂದ್ರ ಪ್ರಸಾದ್, ಹೃದಯ ಶಿವ, ನಿಂಗರಾಜ ಸಿಂಗಾಡಿ, ಮಲ್ಯ ಬಾಗಲಕೋಟ, ಡಾ. ಶರಣು ಹುಲ್ಲೂರ, ಡಾ. ವೀರೇಶ ಹಂಡಿಗಿ, ಡಾ ಪ್ರಭು ಗಂಜಿಹಾಳ, ನಟಿ ಲಕ್ಷಿತಾ, ಮಯೂರಿ, ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಹರೀಶ್ ರಾಜ್, ದಿಯಾ ಚಿತ್ರದ ನಾಯಕ ನಟ ದೀಕ್ಷಿತ್ ಶೆಟ್ಟಿ, ಚೇರ್ಮನ್ ಚಿತ್ರದ ನಾಯಕ ನಟ ಮನು ಸೇರಿದಂತೆ ಅನೇಕ ಕಿರುಚಿತ್ರ, ಚಲನಚಿತ್ರಗಳಿಗೆ ಸಂಬಂಧಿಸಿದವರು ಆಗಮಿಸಲಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ನಲವತ್ತು ಚಲನಚಿತ್ರ, ಕಿರುಚಿತ್ರಗಳ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಭಾಗವಹಿಸಲಿದ್ದಾರೆ.
Also read: ಚಂದ್ರಗುತ್ತಿ: ಕೆರೆ ಸ್ವಚ್ಚತಾ ಕಾರ್ಯ ನಡೆಸಿ ಮರು ಕಾಯಕಲ್ಪಕ್ಕೆ ಮುಂದಾದ ಗ್ರಾಮಸ್ಥರು
ಚಂದ್ರಶೇಖರ ಮಾಡಲಗೇರಿ ಸಾರಥ್ಯದ ಈ ಚಲನಚಿತ್ರೋತ್ಸವದ ಮೊದಲ ದಿನ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬವಾದ್ದರಿಂದ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಪುನೀತ ಪ್ರಶಸ್ತಿ, ರಾಜರತ್ನ ಹಾಗೂ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಂಜೆ ಚಿತ್ರ ಪ್ರದರ್ಶನ ಹಾಗೂ ಚಿತ್ರದ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಎರಡನೇ ದಿನ ಒಟ್ಟು ಎರಡು ಚಲನಚಿತ್ರ, ನಾಲ್ಕು ಕಿರುಚಿತ್ರ ಹಾಗೂ ಎರಡು ಅಲ್ಬಮ್ ಗೀತೆಗಳನ್ನು ಬೆಳ್ಳಿ ತರೆಯಲ್ಲಿ ವೀಕ್ಷಿಸಬಹುದಾಗಿದೆ. ಎರಡು ಚಿತ್ರಗಳ ಪ್ರದರ್ಶನದ ನಂತರ ಆಯಾ ಚಿತ್ರತಂಡದಿಂದ ಚಿತ್ರದ ಜನಾಭಿಪ್ರಾಯಗಳನ್ನು ಮಾರ್ಗದರ್ಶನ ಪಡೆಯಬಹುದಾಗಿದೆ. ಇಳಿಹೊತ್ತು ಚಿತ್ರ ಮಂಜರಿ ಎಂಬ ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದು ಹಾಡು ನೃತ್ಯಗಳ ಜುಗಲ್ ಬಂದಿ ಜರುಗಲಿದೆ.
ಮೂರನೇ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರ ಪ್ರದರ್ಶನ ಹಾಗೂ ರಾಜರತ್ನ ಚಿತ್ರ ಪ್ರಶಸ್ತಿ ನೀಡಲಾಗುತ್ತದೆ ನೀಡಲಾಗುತ್ತದೆ ಎಂದು ಸಂಘಟಕರಾದ ಚಂದ್ರಶೇಖರ ಮಾಡಲಗೇರಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಚಂದ್ರಶೇಖರ ಮಾಡಲಗೇರಿ, ಮೋ-9986821096 ಗೆ ಸಂಪರ್ಕಿಸಬಹುದಾಗಿದೆ.
ವರದಿ: ಡಾ.ಪ್ರಭು ಗಂಜಿಹಾಳ, ಮೊ: 9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post