ಕಲ್ಪ ಮೀಡಿಯಾ ಹೌಸ್ | ಸೊರಬ |
ನಮ್ಮ ಪೂರ್ವಿಜರ ಖಗೋಳ ಪ್ರಾಜ್ಞತೆಯ ಜೀವಂತಿಕೆ ಪ್ರಸ್ತುತ ಚಂದ್ರಯಾನ-3 ಸಾಬೀತು ಪಡಿಸಿತು. ಈ ಅವಿಸ್ಮರಣೀಯ ಸನ್ನಿವೇಶವನ್ನ ವೀಕ್ಷಿಸಲು ಪಟ್ಟಣದ ಜನತೆ ಹಾಗೂ ವಿದ್ಯಾರ್ಥಿಗಳು ನೆರೆದು ಹರ್ಷೋದ್ಘಾರ ಸೂಸಿದರು.
ವೀಕ್ಷಣೆಗೆ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ, ವಿದ್ಯಾರ್ಥಿ ಹಿತರಕ್ಷಣಾ ಸಮಿತಿ, ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ ಸಹಕರಿಸಿದ್ದು, ಪಟ್ಟಣದ ಪಪೂ ಕಾಲೇಜು ಪ್ರೌಢಶಾಲೆ ಆವರಣದಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ವೇಳೆ ಮಾಧ್ಯಮದ ಜೊತೆ ಮಾತಾಡಿದ ಬಿಜೆಪಿ ಮಂಡಲಾಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ವಿಶ್ವಗುರು ಆಗುವತ್ತ ಭಾರತದ ಧಿಟ್ಟ ಹೆಜ್ಜೆಯಿದು. ಪ್ರಧಾನಿಯವರ ಸಹಕಾರ, ಪ್ರೇರಣೆಯಿಂದಾಗಿ ಇಸ್ರೋ ಅಭೂತಪೂರ್ವ ಯಶಸ್ಸು ಪಡೆದಿರುವುದು ನಾಡಿನ ಜನತೆಗೆ ಸಂತಸ ತಂದಿದೆ.
ವಿಜ್ಞಾನಿಗಳ ಅವಿರತ ಶ್ರಮದ ಕಾರ್ಯವೈಖರಿ ಇಡೀ ಜಗತ್ತಿನ ಗಮನ ಸೆಳೆದಿದ್ದು ದೇಶದ ಕೋಟಿಕೋಟಿ ಜನತೆ ಇವರನ್ನು ಶ್ಲಾಘಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಆಯೋಜಕರಾದ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ರಾಜೇಂದ್ರ ಜೈನ್, ಶ್ರೀ ಪಾದ ಬಿಚ್ಚುಗತ್ತಿ, ಮಧುಕೇಶ್ವರ, ಜೆ.ಎಸ್.ಚಿದಾನಂದ ಗೌಡ, ರಾಘುಬಾಪಟ್, ಪಪೂ ಕಾಲೇಜು ಉಪ ಪ್ರಾಂಶುಪಾಲ ಫಕ್ಕೀರಪ್ಪ, ಸಿಬ್ಬಂದಿ, ಶಿಕ್ಷಕ ಕೃಷ್ಣಾನಂದ್, ಮೋಹನದಾಸ್, ಅಣ್ಣಾಜಿಗೌಡ, ಯುವಬ್ರಿಗೇಡ್ ಅನಿಲ್, ಬಣ್ಣದ ಬಾಬು, ದತ್ತಾತ್ರೇಯ, ಸಂದೀಪ್ ಹಾಗೂ ಶಿಕ್ಷಕ ವಿದ್ಯಾರ್ಥಿಗಳು ಪಾಲ್ಗೊಂಡರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















