(ಈ ಲೇಖನಕ್ಕೆ ಪ್ರೇರಣೆ ನೀಡಿದವರು ಒಬ್ಬ ಆರ್ಥಿಕ ತಜ್ಞರು. ಸಮಗ್ರ ವಿಚಾರವನ್ನು ನನ್ನ ಬಳಿ ಹಂಚಿಕೊಂಡರು. ಆ ಪ್ರೇರಣೆಯಿಂದ ಈ ಲೇಖನ ಮೂಢಿಬಂತು)
ಎಷ್ಟೇ ಸೂಕ್ಷ್ಮ ಇದ್ದರೂ ತೆರಿಗೆ ಕಳ್ಳರನ್ನು ಹಿಡಿಯಲು ಬಹಳ ಕಷ್ಟ. ಈಗ ಕೇವಲ ಬಡ, ಮಧ್ಯಮ ವರ್ಗ ಮತ್ತು ಸರಕಾರಿ ನೌಕರಿಯವರದ್ದು ಮಾತ್ರ ಪ್ರಾಮಾಣಿಕ ತೆರಿಗೆ ಬೊಕ್ಕಸಕ್ಕೆ ಬೀಳುತ್ತದೆ. ಇತರೆ ವ್ಯಾಪಾರಿಗಳಾಗಲೀ, ಉದ್ದಿಮೆಯವರಾಗಲೀ ತೆರಿಗೆ ವಂಚನೆಗೆ ಬೇಕಾದಷ್ಟು ದಾರಿ ಹುಡುಕಿಕೊಂಡಿದ್ದಾರೆ.
ಇನ್ನು Demonetizeನಿಂದ ಫಲ ಸಿಕ್ಕಿದೆಯೋ? ಖಂಡಿತ ಫಲ ಸಿಕ್ಕಿಲ್ಲ. ಇದರಲ್ಲಿ ಪರದಾಡಿದ್ದು ಬಡವರು ಮತ್ತು ಮಧ್ಯಮ ವರ್ಗದವರು ಮಾತ್ರ. ಶ್ರೀಮಂತರು ಅವರವರ ಉದ್ದಿಮೆಗಳ ಮೂಲಕ ಹಳೆಯದ್ದನ್ನು ಹೊಸತು ಮಾಡಿಕೊಂಡರು. ಉದಾ: ಪೆಟ್ರೋಲ್ ಬಂಕಿನಲ್ಲೇ ನೋಡಿ. ಹಳೆಯ ನೋಟ್’ನ ಹೊಸ ನೋಟಿಗೆ ಪರಿವರ್ತನೆ ಮಾಡಿಕೊಂಡರು! ಹಾಗಾದರೆ ಅನಾಣ್ಯೀಕರಣದಿಂದ ಒಂದು ಲೆಕ್ಕದಲ್ಲಿ ಪ್ರಯೋಜನ ಆದದ್ದು ಕೇವಲ ಶೇ.10ರಷ್ಟು ಮಾತ್ರ ಎನ್ನಬಹುದು. ಇನ್ನೊಂದೆಡೆ ಈಗಲೂ ಹೊಸ 2000, 500 ರೂ. ನೋಟುಗಳ ಖೋಟಾ ಪ್ರತಿಗಳು ಈಗಾಗಲೇ ಇಳಿದಾಗಿದೆ. ಇದನ್ನು ನಾಶ ಮಾಡಲು ಮತ್ತೆ ಅನಾಣ್ಯೀಕರಣ ಮಾಡಿದರೆ ಯದ್ವಾತದ್ವವೂ ಆದೀತು.
ಹಾಗಾದರೆ ಹೇಗೆ ಇದನ್ನು ನಿಯಂತ್ರಣ ಮಾಡಬಹುದು?
ಮೊದಲಾಗಿ 500, 2000 ರೂಪಾಯಿ ನೋಟುಗಳ ಚಲಾವಣೆ ನಿಲ್ಲಿಸಬೇಕು. ಹಾಗಾದರೆ ಇದು ಮತ್ತೊಂದು ಸಮಸ್ಯೆಯೇ ಆಗೋದಿಲ್ವಾ? ಆಗಲ್ಲ. ಐದು ಸಾವಿರದೊಳಗಿನ ವ್ಯವಹಾರ ಈಗಿರುವ ರೂ.50, ರೂ.100, ರೂ.200 ನೋಟುಗಳ ಮೂಲಕ ಅಂದರೆ cash ಮೂಲಕ ನಡೆಯಲಿ. ಅದಕ್ಕಿಂತ ಹೆಚ್ಚಿನ ವ್ಯವಹಾರಕ್ಕೆ cashless ಮೂಲಕವೇ ನಡೆಯಬೇಕು. ಇದು ಅವರವರ ಬ್ಯಾಂಕ್ ಖಾತೆಯ ಮೂಲಕವೇ ನಡೆಯಬೇಕು. ಅಲ್ಲಿ transaction ಆಧಾರದಲ್ಲಿ ತೆರಿಗೆ ಬೀಳಬೇಕು.
ಅದರಲ್ಲೂ ಕೃಷಿ, ಹೈನುಗಾರಿಕೆ ಇತ್ಯಾದಿ ಜೀವನೋಪಯೋಗಿ ವ್ಯವಹಾರಕ್ಕೆ ಇಂತಿಷ್ಟು ತೆರಿಗೆ ವಿನಾಯ್ತಿ, commercial ವ್ಯವಹಾರಕ್ಕೆ ಇಂತಿಷ್ಟು, ಕಾಯಿಲೆ ರೋಗ ಆಸ್ಪತ್ರೆ ಇತ್ಯಾದಿಗಳಿಗೆ ತೆರಿಗೆ ಮುಕ್ತ ಮಾಡಬೇಕು. ಇದರಿಂದ ಈಗ ಸಂಗ್ರಹವಾಗುವ ತೆರಿಗೆಯ ಹತ್ತು ಪಟ್ಟು ತೆರಿಗೆಯೂ ಸಿಗುತ್ತದೆ ಮತ್ತು ಖೋಟಾ ನೋಟಿನ ಹಾವಳಿಗೆ ತಡೆಯೂ ಬಿದ್ದಂತೆ ಆಗುತ್ತದೆ. ಅಲ್ಲದೆ ಕಪ್ಪು ಹಣವನ್ನೂ ನಿಯಂತ್ರಿಸಬಹುದು.
ಇದಲ್ಲದೆ ರಿಸರ್ವ್ ಬ್ಯಾಂಕಿಗೆ ದೊಡ್ಡ ಮೊತ್ತದ ನೋಟು ಮುದ್ರಿಸುವುದೂ, ಮುದ್ರಣದ ಖರ್ಚೂ ಉಳಿಯಬಹುದು. ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಪ್ರಾಯೋಗಿಕವಾಗಿ ಚಾಲನೆಯಲ್ಲಿದ್ದು, ಉತ್ತಮ ಯಶಸ್ಸಿನತ್ತ ಸಾಗುತ್ತಲೂ ಇದೆ.
ಇಲ್ಲೊಂದು ಸಲಹೆಯೂ ಇದೆ. ನಮ್ಮಲ್ಲಿ ಮೊದಲು ಸಾಲ ಮಾಡಿ ಹಸು ತರುತ್ತಾರೆ. ನಂತರ ನಿಧಾನವಾಗಿ ಹಟ್ಟಿ ಕಟ್ಟುವುದು. ಹಟ್ಟಿ ತಯಾರಾಗುವಾಗ ಹಸು ಅಸುನೀಗುತ್ತದೆ. ಹಾಗಾಗಬಾರದು. ಇದನ್ನು implement ಮಾಡಬೇಕಾದರೆ ಸಾಕಷ್ಟು ರೂ.5, ರೂ.10, ರೂ.20, ರೂ.50, ರೂ.100, ರೂ.200 ನೋಟುಗಳು ತಯಾರಾಗಬೇಕಾಗುತ್ತದೆ.
ಇದರಿಂದ ಬಡ, ಮಾಧ್ಯಮ ವರ್ಗದವರಿಗೆ ತುಂಬಾ ಅನುಕೂಲ ಆಗುತ್ತದೆ. ಅಲ್ಲದೆ ನೌಕರಿಯನ್ನೇ ನಂಬಿ ಜೀವಿಸುವವರಿಗೂ ವರದಾನ ಆಗುತ್ತದೆ.
ಇದನ್ನು ಕೇಂದ್ರದವರೆಗೆ share ಮಾಡುದರೆ ಸರ್ವೇ ಜನಾಃ ಸುಖಿನೋ ಭವಂತು ಎಂಬ ವಾಕ್ಯವನ್ನು ಉಳಿಸಿಕೊಂಡಂತಾಗುತ್ತದೆ.
Discussion about this post