No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
  • Advertise With Us
  • Grievances
  • About Us
  • Contact Us
Wednesday, August 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಶ್ರೀಮದ್ ಭಾಗವತ- ಭಕ್ತರ ಬದುಕಿನ ಸಂಜೀವಿನಿ-ಪಿಬತ ಭಾಗವತಂ ರಸಮಾಲಯಂ

kalpa News by kalpa News
September 13, 2019
in Special Articles
0
ಶ್ರೀಮದ್ ಭಾಗವತ- ಭಕ್ತರ ಬದುಕಿನ ಸಂಜೀವಿನಿ-ಪಿಬತ ಭಾಗವತಂ ರಸಮಾಲಯಂ
Share on FacebookShare on TwitterShare on WhatsApp

ಭಗವಂತನಾದ ಶ್ರೀ ವೇದವ್ಯಾಸ ರೂಪಿ ಪರಮಾತ್ಮನು ತಾನೇ ಸ್ವತಃ ರಚಿಸಿದ ಮಹಾನ್ ಗ್ರಂಥ. ಇದು ದೇವಲೋಕದ ಅಮೃತಕ್ಕಿಂತಲು ಮಿಗಿಲು. ಇದಕ್ಕೆ ಸಮನಾದದು ಯಾವುದು ಇಲ್ಲ. ಸಿಹಿಯುಳ್ಳ ಪಾನೀಯ, ಕುಡಿದಾಗ ಮನಸ್ಸು ಆನಂದಗೊಳ್ಳಬಹುದು. ಆದರೆ ಅತಿಯಾಗಿ ಕುಡಿದಾಗ ಅದರಿಂದ ಏನಾದರು ಒಂದು side effect ಆಗಿ ಚೂರು ಆರೋಗ್ಯ ವ್ಯತ್ಯಾಸವನ್ನು ಕಾಣಬಹುದು. ಆದರೆ ಈ ಭಾಗವತ ಅಮೃತ ಎಂಬ ಸಿಹಿಯಾದ ಪಾನೀಯ ಎಷ್ಟು ಬಾರಿಯಾದರು ದಿನಕ್ಕೆ ಪಾನ ಮಾಡಿರಿ. ಇದರಿಂದ ಯಾವುದೇ side effect ಇಲ್ಲ. ಇದರಿಂದ ಲಾಭವೇ ಹೊರತು ನಷ್ಟ ಇಲ್ಲ. ಈ ಗ್ರಂಥ ಪಾರಾಯಣ ಫಲ:

1. ಕಾಲ ದೇಶಗಳಿಂದ ಮಾಡಿದ ಪಾಪಗಳನ್ನು ಸಹ ಇದು ಭಕ್ತಿಯಿಂದ ಶ್ರವಣ, ಪಠಣ ಮನನ ಮಾಡಿದರೆ ಕಳೆದು ಹಾಕುತ್ತದೆ.

ಇದಕ್ಕೆ ಪರಿಕ್ಷೀತ ರಾಜ ಸಾಕ್ಷಿ. 2.ನಮ್ಮ ಮನೆಯಲ್ಲಿ ಹಿರಿಯರು ಹಿಂದೆ ಯಾರಾದರು ಸತ್ತು ಹೋದಾಗ,ಅವರಿಗೆ ಸರಿಯಾದ ರೀತಿಯಲ್ಲಿ ಕರ್ಮ ಸಂಸ್ಕಾರ ನಡೆಯದೇ ಹೋದಾಗ, ಅವರು ಪ್ರೇತವಾಗಿ ಉಳಿದರೆ, ಅದರ ನಿವಾರಣೆಗೋಸ್ಕರವಾಗಿ ಸಹ ಶ್ರೀ ಮದ್ ಭಾಗವತ ಪಾರಾಯಣ,ಶ್ರವಣವನ್ನು ಮಾಡಲು ಹೇಳುತ್ತಾರೆ. ಇದಕ್ಕೆ  ಇದರಲ್ಲಿ ಬರುವ ಗೋಕರ್ಣ ಹಾಗು ಅವನ ಸಹೋದರನ ನ ಕತೆಯೇ ಸಾಕ್ಷಿ. 3.ಮೋಕ್ಷ ಸಾಧನೆಗಾಗಿ ಈ ಭಾಗವತ ಶ್ರವಣ.ಇದಕ್ಕೆ ಪರಿಕ್ಷೀತ ರಾಜ ಪ್ರತ್ಯಕ್ಷವಾಗಿ ಉದಾಹರಣೆ.

ಶ್ರೀ ಮದ್ ಭಾಗವತ ದಲ್ಲಿ 18,000 ಗ್ರಂಥ ಶ್ಲೋಕಗಳಿವೆ. ಶ್ರೀಮದ್ ಭಾಗವತವು ಹನ್ನೆರಡು ಸ್ಕಂಧಗಳಿಂದ ಕೂಡಿದೆ.

ಪರೀಕ್ಷಿತ ಮಹಾರಾಜ ಹಾಗು ಶುಕ ಮುನಿಗಳ ನಡುವಿನ ಸಂವಾದ ರೂಪವಾಗಿದೆ. ಪ್ರತಿ ಒಂದು ಸಾವಿರ ಗ್ರಂಥಗಳಿಗು ಒಂದೊಂದು ಭಗವದ್ ರೂಪ ಇದೆ.ಈ ರೀತಿಯಲ್ಲಿ 18,000 ಗ್ರಂಥ ಶ್ಲೋಕಗಳಿಗೆ 18 ಭಗವದ್ ರೂಪಗಳಿವೆ. ಹನ್ನೆರಡು ಸ್ಕಂಧಗಳಿಗೆ ಹನ್ನೆರಡು ಭಗವಂತನ ರೂಪಗಳು ಇವೆ. ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂಧನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷಿಕೇಶ, ಪದ್ಮನಾಭ, ಮತ್ತು ದಾಮೋದರ ಇವೇ ಭಗವಂತನ ಆ ಹನ್ನೆರಡು ರೂಪಗಳು..

ಈ ಭಾಗವತ ಶ್ರವಣ,ಪಾರಾಯಣದ ಫಲ ಗಂಗಾ ನದಿ ಸ್ನಾನಕ್ಕಿಂತಲು ಮಿಗಿಲು. ಗಂಗಾನದಿಯ ಸ್ನಾನ ಮಿಂದವರ ಪಾಪವನ್ನು ತೊಳೆದರೆ, ಶ್ರೀ ಮದ್ ಭಾಗವತ ಸಂಸಾರದ ಜಿಡ್ಡು ನಾಶಪಡಿಸಿ ನಮಗೆಲ್ಲ ಪಾಪವನ್ನು ಲೇಪನ ವಿಲ್ಲದಂತೆ ಮಾಡುವದು. ಗಂಗಾನದಿಯನ್ನು  ನಮ್ಮ ಅವಶ್ಯಕತೆ ಬೇಕಾದಷ್ಟು ಶೇಖರಣೆ ಮಾಡಲು ಒಂದು ಪಾತ್ರೆ ಬೇಕು. ಆದರೆ ಈ ಭಾಗವತಕ್ಕೆ ಸಂಗ್ರಹ ಮಾಡಲು ನಮ್ಮ ತಲೆ ಎನ್ನುವ ಪಾತ್ರೆ ಮಾತ್ರ ಸಾಕು. ಗಂಗಾ ನದಿಯಲ್ಲಿ  ಇಡೀ ದೇಹವನ್ನು ಮುಳುಗಿದಾಗ ಮಾತ್ರ ಸ್ನಾನ ಮಾಡಿದ ಫಲ ಬರುತ್ತದೆ. ಆದರೆ ನಿತ್ಯದಲ್ಲಿ ಈ ಭಾಗವತ ಇಡೀ ಗ್ರಂಥದ, ಎಲ್ಲಾ ಶ್ಲೋಕಗಳನ್ನು ಪಾರಾಯಣ ಮಾಡಲು ಆಗದಿದ್ದರೆ, ಕೊನೆಗೆ ಒಂದು ಶ್ಲೋಕವಾದರು ಹೇಳುವದು. ಅದು ಸಹ ಆಗದಿದ್ದರೆ ಕೊನೆಯಲ್ಲಿ ಶ್ಲೋಕದ ಕಾಲುಭಾಗ ವಾದರು ಸರಿ, ಕಿವಿಗೊಟ್ಟು ಭಕ್ತಿ ಇಂದ ಕೇಳಿದರೆ, ಸಾವಿರ ಗೋದಾನದ ಫಲ ಬರುತ್ತದೆ. ಶ್ರೀಹರಿಯ ಪ್ರೀತಿ ಎಂಬ ಉಡುಗೊರೆ ನಮಗೆ ಸಿಗುತ್ತದೆ.

ಬರಿಯ ಕಾಲುಭಾಗದಷ್ಟು ಶ್ರವಣ ಮಾಡಿದರೆ ನಮಗೆ ಕಾವಲು ಕಾಯುವ, ನಮ್ಮನ್ನು ರಕ್ಷಣೆ ಮಾಡುವ, ನಮ್ಮ ಕುಲವನ್ನು ಉದ್ದಾರ ಮಾಡುವ ಈ ಭಾಗವತಕ್ಕೆ ಎಣೆಯುಂಟೆ?? ಗಂಗಾ ಸ್ನಾನ ಸಂಕಲ್ಪ ಪೂರ್ವಕವಾಗಿ ಮಾಡಿದರೆ ಮಾತ್ರ ಫಲ. ಅದಕ್ಕೆ ಮೋಕ್ಷ ನೀಡಲು ಸಾಧ್ಯವಿಲ್ಲ. ಆದರೆ ಭಾಗವತ ಹಾಗಲ್ಲ ನಮಗೆ ಮೋಕ್ಷವನ್ನು ಸಹ ಕೊಡುತ್ತದೆ. ಶ್ರೀ ಮದ್ ಭಾಗವತ ವನ್ನು ರಚಿಸಿದವರು ಶ್ರೀ ವೇದವ್ಯಾಸರು. ರಚನೆಯನ್ನು ಮಾಡಿದ ಸ್ಥಳ ಶಮ್ಯಾಪ್ರಾಸ.(ಸರಸ್ವತಿ  ಮತ್ತು ಅಲಕನಂದಾ(ಗಂಗಾದೇವಿ ಇನ್ನೊಂದು ಹೆಸರು) ನದೀ ಸಂಗಮದ ಸ್ಥಳ) ಇದನ್ನು ಶ್ರೀವೇದವ್ಯಾಸರಿಂದ ಕೇಳಿದವರು ಗಂಗಾಧರ ನಾದ ಶ್ರೀಶುಕ ಮುನಿಗಳು. ಅವರು ಉಪದೇಶ ಮಾಡಿದ್ದು ಪರೀಕ್ಷಿತ ರಾಜನಿಗೆ ಗಂಗಾನದಿಯ ತಟದಲ್ಲಿ. ಹಾಗಾಗಿ ಪರಮ ಪವಿತ್ರ ವಾದುದು ಈ ಭಾಗವತ ಪುರಾಣ. ಇದನ್ನು ಯಾರು ಹೇಳುವರೊ ಮತ್ತು ಯಾರು ಕೇಳುವರೊ ಮತ್ತು ಯಾರು ಹೇಳಿಸುವರೊ, ಈ ಮೂವರನ್ನು ಪಾವನಗೊಳಿಸಿ ಉದ್ದಾರ ಮಾಡುತ್ತದೆ. ಇಂತಹ ಪರಮ ಮಂಗಳಕರವಾದ ಭಾಗವತ ವನ್ನು ವಿಶೇಷವಾಗಿ ಪಾರಾಯಣ ಮತ್ತು ಶ್ರವಣವನ್ನು ಮಾಡೋಣ.ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನ ಪಡೋಣ.

Tags: DrGururajPoshettihalliKaliyugaKalpaNewsKannadaArticleLordSriKrishnaSpecialArticleSrimadBhagavataಕಲಿಯುಗಡಾ_ಗುರುರಾಜಪೋಶೆಟ್ಟಿಹಳ್ಳಿಧರ್ಮಭಾಗವತ_ಪುರಾಣಶ್ರೀಮದ್_ಭಾಗವತಶ್ರೀವೇದವ್ಯಾಸ
Share218Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ತೆರಿಗೆಗಳ ರೂಪ ಬದಲಾಯಿಸಿ, ದೊಡ್ಡ ಮೊತ್ತದ ನೋಟು ಬ್ಯಾನ್ ಮಾಡಿ

Next Post

ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

kalpa News

kalpa News

Next Post
ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

Leave a Reply Cancel reply

Your email address will not be published. Required fields are marked *

No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL