No Result
View All Result
International Yoga Day in SWR Bengaluru
English Articles

SWR | Celebrates International Yoga Day with Enthusiastic Participation

by ಕಲ್ಪ ನ್ಯೂಸ್
June 23, 2026
0

Kalpa Media House  |  Bengaluru  | The South Western Railway Bengaluru Division celebrated the 12th International Yoga Day with a...

Read moreDetails
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Periodicity of Bhubaneswar–Yesvantpur Special Train Extended

June 19, 2026
  • Advertise With Us
  • Grievances
  • About Us
  • Contact Us
Tuesday, June 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರಾಯರ ಪವಾಡಗಳ ಸದೃಶತಾಣ ಚನ್ನಗಿರಿ: ಪುಣ್ಯವಿದ್ದರೆ ಮಾತ್ರ ಪಂಚಮ ಮಂತ್ರಾಲಯಕ್ಕೆ ಭೇಟಿ ನೀಡಲು ಸಾಧ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 25, 2019
in Special Articles
0
ರಾಯರ ಪವಾಡಗಳ ಸದೃಶತಾಣ ಚನ್ನಗಿರಿ: ಪುಣ್ಯವಿದ್ದರೆ ಮಾತ್ರ ಪಂಚಮ ಮಂತ್ರಾಲಯಕ್ಕೆ ಭೇಟಿ ನೀಡಲು ಸಾಧ್ಯ
Share on FacebookShare on TwitterShare on WhatsApp

ಅದು ಮಲೆನಾಡಿನಿಂದ ಬಯಲುಸೀಮೆಗೆ ಸಂಪರ್ಕಿಸುವ ಪ್ರದೇಶ. ಅಡಿಕೆಯ ನಾಡು ಚನ್ನಗಿರಿ. ಇಂತಹ ಸ್ಥಳದಲ್ಲೇ ಕಲಿಯುಗ ಕಾಮಧೇನು ರಾಯರು ನೆಲೆಸಿದ್ದು ಪಂಚಮ ಮಂತ್ರಾಲಯ ಎಂದೇ ಖ್ಯಾತವಾಗಿದೆ. ಇಂತಹ ಕ್ಷೇತ್ರದ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಬನ್ನಿ.

ಚನ್ನಗಿರಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನ ಸ್ಥಾಪನೆಯ ಸಂಗತಿ ಅತ್ಯಂತ ಗಹನವಾಗಿದೆ. ಆಸ್ತಿಕರಿಗೆ ಮಹಿಮಾ ಪ್ರದಾಯಕ, ಪವಾಡ ಸದೃಶ ಭಾಸವಾಗುತ್ತದೆ.

ಕೋದಂಡರಾಮ ದೇವರು

ಚನ್ನಗಿರಿಯ ಶಾನುಭೋಗರಾದ ದೊಡ್ಡ ನರಸಪ್ಪ ಮತ್ತು ವೇದಮೂರ್ತಿಗಳಾದ ಸ್ವಾಮಿರಾಯಾಚಾರ್ಯರ ಗೆಳೆತನ ಮತ್ತು ಅಧ್ಯಾತ್ಮಿಕ ಮನಸ್ಸುಗಳ ಸಮ್ಮಿಲದ ದ್ಯೋತಕವಾಗಿದೆ. ಈರ್ವರಿಗೂ ಒಂದೇ ರಾತ್ರಿ ಸ್ವಪ್ನದಲ್ಲಿ ರಾಯರು ಚನ್ನಗಿರಿಯಲ್ಲಿ ಬೃಂದಾವನ ರೂಪದಲ್ಲಿ ಪೂಜೆ ಸ್ವೀಕರಿದಂತೆ ಅನುಭವವಾಯಿತು. ಮಾರನೆಯ ದಿನ ಈರ್ವರೂ ತಮ್ಮ ಅನುಭವವನ್ನು ಪರಸ್ಪರ ಹೇಳಿಕೊಂಡರು.


ಸ್ವಪ್ನದ ಸಾಮ್ಯತೆ ಅವರಿಗೆ ಚನ್ನಗಿರಿಯಲ್ಲಿ ಬೃಂದಾವನ ಸ್ಥಾಪನೆಗೆ ನಾಂದಿಯಾಯಿತು. ಅದರ ಫಲವಾಗಿ ಶಿಲೆಯಲ್ಲಿ ಬೃಂದಾವನ ಕೆತ್ತಲು ಶಿಲ್ಪಿಯನ್ನು ಕಂಡರು. ಸಮೀಪದ ಅಜ್ಜಿಹಳ್ಳಿಯ ಶಿಲ್ಪಿ ನಂಜಾಚಾರಿ ಮೊದಲಿಗೆ ತುಸು ಅಸಡ್ಡೆ ತೋರಿಸಿದನಂತೆ. ಅದರ ಫಲವಾಗಿ ಆತನ ಕಣ್ಣೆರಡೂ ಕಾಣಿಸದೇ ಕುರುಡನಾದ. ಶ್ರೀರಾಯರನ್ನು ಮೊರೆಹೋಗು ಎಂದು ಆಪ್ತರು ಸೂಚಿಸಿದರು. ಶ್ರೀರಾಯರನ್ನು ಬೇಡಿಕೊಂಡ. ಚನ್ನಗಿರಿಯಲ್ಲಿ ಬೃಂದಾವನ ಕೆತ್ತಿ ಕೊಡುವೆ ಎಂದು ಸಂಕಲ್ಪವೇನೋ ಮಾಡಿದ. ಆದರೆ ದೃಷ್ಟಿಯೇ ಇಲ್ಲದೆ ಶಿಲೆಯ ಕೆಲಸ ಮಾಡುವುದು ಹೇಗೆ? ಕೊನೆಗೆ ಶ್ರೀರಾಯರ ಮೊರೆ ಹೋದ.

ರಾಯರೇ ಅವನಿಗೆ ಅಭಯ ನೀಡಿ ಕೆತ್ತುವ ಸ್ಥಳ ಮಾತ್ರ ಕಾಣಿಸುತ್ತದೆ. ತಾವು ಅವನಿಗೆ ಹೇಗೆ ಉಳಿಯಾಡಿಸಬೇಕೆಂದು ಮಾರ್ಗದರ್ಶನ ನೀಡುವುದಾಗಿ ಸ್ವಪ್ನದಲ್ಲಿ ಹೇಳಿದರು. ಅದರಂತೆ ಬೃಂದಾವನದ ನಿರ್ಮಾಣ ಕಾರ್ಯ ಶುರುವಾಯಿತು.


ಕ್ರಮೇಣ ಶಿಲ್ಪಿ ನಂಜಾಚಾರಿ ಕೆತ್ತನೆ ಮುಗಿಸಿದ ನಂತರ ಅ್ವನಿಗೆ ಗುರುಗಳು ದೃಷ್ಟಿಭಾಗ್ಯ ನೀಡುತ್ತಾರೆ. ಸುಂದರವಾದ ಬೃಂದಾವನ ್ಕಂಡು ಅವನ ಶಿಲ್ಪಿತನ ಬೆರಗಾಗುವಂತೆ ಮಾಡುತ್ತದೆ.

ಚನ್ನಗಿರಿಯ ಭಕ್ತರೆಲ್ಲರೂ ಮಂತ್ರಾಲಯಕ್ಕೆ ಮೃತ್ತಿಕೆ ತರಲು ಪ್ರಯಾಣ ಮಾಡುತ್ತಾರೆ. ಮಂತ್ರಾಲಯದಲ್ಲಿ ಶ್ರೀವರದೇಂದ್ರ ತೀರ್ಥರು ಪೀಠಾಧಿಪತಿಗಳು. ಶ್ರೀರಾಯರ ಸ್ವಪ್ನ ವೃತ್ತಾಂತವನ್ನು ತಮ್ಮ ತಪೋ ಮಹಿಮೆಯಿಂದ ಅರಿಯುತ್ತಾರೆ.


ಎಲ್ಲಕ್ಕಿಂತ ಪ್ರಥಮ ಪ್ರಾಶಸ್ತ್ಯ ನೀಡಿ ಭಕ್ತ ವೃಂದವನ್ನು ಆದರಿಂದ ಬರಮಾಡಿಕೊಳ್ಳುತ್ತಾರೆ. ಶ್ರೀರಾಯರ ಬೃಂದಾವನದ ಮೃತ್ತಿಕೆಯನ್ನು ಆಶೀರ್ವಾದಪೂರ್ವಕವಾಗಿ ನೀಡುತ್ತಾರೆ.

ಭಕ್ತವೃಂದ ಶ್ರೀವರದೇಂದ್ರರಿಗೆ ಆಮಂತ್ರಣ ನೀಡಿ ಚನ್ನಗಿರಿಗೆ ಆಗಮಿಸಿ ಶ್ರೀರಾಯರ ಮೃತ್ತಿಕಾ ಬೃಂದಾವನ ಪ್ರತಿಸ್ಠಾಪನೆ ನೆರವೇರಿಸಲು ಪ್ರಾರ್ಥಿಸುತ್ತಾರೆ. ತಾ.6-2-1783 ರಂದು ಅಂದರೆ ಶುಭಕೃತ್ ಸಂವತ್ಸರದ ಮಾಘಮಾಸದ ಶುದ್ಧ ಪಂಚಮಿಯಂದು ಚನ್ನಗಿರಿಗೆ ಶ್ರೀವರದೇಂದ್ರರು ಆಗಮಿಸಿ ಪ್ರತಿಷ್ಠಾಪನೆ ನೆರವೇರಿಸುತ್ತಾರೆ.


ಹೀಗೆ ಚನ್ನಗಿರಿಯಲ್ಲಿ ಐದನೇ ಮೃತ್ತಿಕಾ ಬೃಂದಾವನ ಸ್ಥಾಪನೆಯಾಗುತ್ತದೆ. ಇಲ್ಲಿನ ಶ್ರೀರಾಯರ ಸೇವೆಗೆ ಎಲ್ಲ ಕಡೆಯಿಂದ ಭಕ್ತಾದಿಗಳು ಬರುತ್ತಾರೆ. ಭಕ್ತರು ಬೇಡಿಕೊಂಡಿದ್ದನ್ನು ಕರುಣಿಸಿದ ಉದಾಹರಣೆಗಳಿವೆ.

ಇಲ್ಲಿನ ಶಿಲ್ಪಿಯ ಕುಶಲತೆಯೆಂದರೆ ಅದು ಶ್ರೀರಾಯರೇ ತಮ್ಮ ಅಪೇಕ್ಷೆಯನುಸಾರ ಬೃಂದಾವನದ ನಾಲ್ಕೂ ಕಡೆ ಕೋದಂಡರಾಮ, ಯೋಗಾನಾರಸಿಂಹ, ಕಾಳಿಂಗಮರ್ದನ ಕೃಷ್ಣ ಮತ್ತು ವೇದವ್ಯಾಸರ ಮೂರ್ತಿಗಳನ್ನು ಕೆತ್ತಿರುವುದು. ಈ ಪ್ರಕಾರದ ಕೆತ್ತನೆ ಚನ್ನಗಿರಿಯ ಬೃಂದಾವನದಲ್ಲಿ ಮಾತ್ರ ನೋಡಲು ಸಾಧ್ಯ. ಶ್ರೀರಾಯರ ಶಿಲ್ಪಕಲಾ ವಿದ್ಯೆಗೆ ಇದು ಕನ್ನಡಿಯಿದ್ದಂತೆ.
ಇದೇ ಇಲ್ಲಿನ ವೈಶಿಷ್ಟ್ಯ!


ಚಿನ್ನದಂಥ ನನ್ನ ಚೆನ್ನ ಚನ್ನಗಿರಿಯ ಶ್ರೀರಾಘವೇಂದ್ರ ಎಂಬ ಕೀರ್ತನೆಯನ್ನು ಸೀತಾರಾಮ ವಿಠ್ಠಲರು ರಚಿಸಿ ಹಾಡಿರುವುದು ಮತ್ತೊಂದು ವಿಶೇಷ ಸಂಗತಿ.
ಪ್ರತೀವರ್ಷ ಮಾಘ ಶುದ್ಧ ಪಂಚಮಿ ಇಲ್ಲಿನ ಶಾನುಭೋಗ ಮನೆತನದವರು ವರ್ಧಂತಿಯನ್ನು ಶ್ರೀಶಾಮಣ್ಣ ಸೇವಾ ಟ್ರಸ್ಟ್‌ ವತಿಯಿಂದ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಈ ಮುಂಚೆ ಮುಜರಾಯಿಗೆ ಸೇರಿದ್ದು ಈಗ ಶ್ರೀರಾಘವೇಂದ್ರ ಸೇವಾ ಟ್ರಸ್ಟ್‌ ವತಿಯಿಂದ ಅಭಿವೃದ್ಧಿ ಚಟುವಟಿಕೆಗಳು ನಿರಂತರ ನಡೆಯುತ್ತಿವೆ.


ಇಂತಹ ಪಂಚಮ ಮಂತ್ರಾಲಯ ಚನ್ನಗಿರಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಯರ ಆರಾಧನಾ ವಿಶೇಷವಾಗಿ ಭಕ್ತರಿಂದ ಅಭಿಷೇಕ ಪೂಜಾದಿಗಳು ನಡೆದವು. ಆಗಸ್ಟ್‌ 18 ಭಾನುವಾರ ಶ್ರೀರಾಯರ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಶ್ರೀರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷ ಶ್ರೀಕೃಷ್ಣ ಉಪಾಧ್ಯ ಅವರ ನೇತೃತ್ವದಲ್ಲಿ ನಾಲ್ಕುದಿನಗಳ ಆರಾಧನಾ ಮಹೋತ್ಸವ ಅತ್ಯಂತ ವೈಭವದಿಂದ ನಡೆಯಿತು.

ಲೇಖನ: ಡಾ.ಸುಧೀಂದ್ರ

Tags: ChannagiriFifth MantralayamKannada ArticleMantralayamSri Raghavendra Swamyಚನ್ನಗಿರಿಪಂಚಮ ಮಂತ್ರಾಲಯಬೃಂದಾವನಮಂತ್ರಾಲಯರಾಯರ ಪವಾಡಶ್ರೀರಾಘವೇಂದ್ರ ಸ್ವಾಮಿ
Share207Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮತ್ತೊಂದು ‘ಅರುಣಾ’ಸ್ತ: ಕಾಡುತಿದೆ ಅನಾಥ ಭಾವ

Next Post

ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಸೈಬರ್ ಅಪರಾಧ | ಕೋಟ್ಯಂತರ ರೂ. ವಂಚನೆಯ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ ಡಿ.ಎಸ್. ಅರುಣ್

ಪರಿಷತ್ ಚುನಾವಣೆಗೆ ಮುಕ್ತ ಮತದಾನ ಪದ್ಧತಿ ಜಾರಿಗೆ MLC ಡಿ.ಎಸ್. ಅರುಣ್ ಆಗ್ರಹ

June 23, 2026
ಮಾಸಿಕ ಪಿಂಚಣಿ ಯೋಜನೆ ಸ್ಥಗಿತ | ಬಡವರಿಗೆ ದ್ರೋಹ: ಶಾಸಕ ಚನ್ನಬಸಪ್ಪ ಆಕ್ರೋಶ

ಬಿಪಿಎಲ್ ಕಾರ್ಡ್ ರದ್ದತಿ ವಿರುದ್ಧ ಶಾಸಕ ಚೆನ್ನಿ ಆಕ್ರೋಶ | ತಕ್ಷಣ ಮರುಪರಿಶೀಲನೆಗೆ ಸೂಚನೆ

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
ಶಿವಮೊಗ್ಗ | ಕೊಡಚಾದ್ರಿ ಚಿಟ್ಸ್ ಯಶಸ್ಸಿನ ನಿಜವಾದ ಶಕ್ತಿ ಗ್ರಾಹಕರು | ಪರಶುರಾಮ್

ಶಿವಮೊಗ್ಗ | ಕೊಡಚಾದ್ರಿ ಚಿಟ್ಸ್ ಯಶಸ್ಸಿನ ನಿಜವಾದ ಶಕ್ತಿ ಗ್ರಾಹಕರು | ಪರಶುರಾಮ್

June 23, 2026
Shivamogga MLC Inspection

ಶಿವಮೊಗ್ಗ | ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಗೆ ಕಿಡಿಕಾರಿದ ಶಾಸಕ ಚನ್ನಬಸಪ್ಪ

June 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL