No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Sunday, August 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಛಾಪೇ ಗುರುಃ ಇಂದಿನಿಂದ ಧನು ರಾಶಿಯಲ್ಲಿ ಗುರು ಸಂಚಾರ: ಯಾವ ರಾಶಿಗೆ ಏನು ಫಲ?

kalpa News by kalpa News
March 29, 2019
in Army
0
ಛಾಪೇ ಗುರುಃ ಇಂದಿನಿಂದ ಧನು ರಾಶಿಯಲ್ಲಿ ಗುರು ಸಂಚಾರ: ಯಾವ ರಾಶಿಗೆ ಏನು ಫಲ?
Share on FacebookShare on TwitterShare on WhatsApp

ಆದಿತ್ಯಾದಿ ನವಗ್ರಹರಿಗೆ ವೀಕ್ಷಣೆಗಳಿದ್ದಂತೆ, ಕುಂಡಲಿಯಲ್ಲಿ ಭಾವಗಳ ವೀಕ್ಷಣೆಗೂ ಬಹಳ ಮಹತ್ವ ಇದೆ. ಕೇವಲ ಅಲ್ಲಿ ಆ ಗ್ರಹ ಇದ್ದಾನೆ. ಅವ ಇವನನ್ನು ನೋಡುತ್ತಾನೆ ಎಂದು ಹೇಳುವುದಲ್ಲ. ಭಾವ ವೀಕ್ಷಣೆಯೂ ಬಲಿಷ್ಟ. ಒಂದು ಲಗ್ನದಿಂದ ಹನ್ನೆರಡು ಭಾವಗಳವರೆಗೆ ವ್ಯಕ್ತಿಯ ಪೂರ್ಣ ಚಿತ್ರಣಗಳಿರುತ್ತದೆ. ಭಾವ ಎಂದರೆ ನಮ್ಮ ಆಡುಭಾಷೆಯ ಮನೆಗಳು. ಒಂದನೆ ಮನೆ, ಎರಡನೆಯ ಮನೆ.. ಇತ್ಯಾದಿ

ಉದಾಹರಣೆಗೆ ಸಿಂಹ ರಾಶಿಯವರಿಗೆ ಪಂಚಮ ಭಾವ ಧನುಸ್ಸು ರಾಶಿ. ಈ ಧನುಸ್ಸು ರಾಶಿ ವೀಕ್ಷಣೆ ಮಾಡುವುದು(ಸಪ್ತಮ ಪೂರ್ಣ ವೀಕ್ಷಣೆ) ಮಿಥುನ ರಾಶಿಯನ್ನು. ಇದು ಸಿಂಹ ರಾಶಿಗೆ ಏಕಾದಶ ಸ್ಥಾನ. ಈ ಸ್ಥಾನವು ಕೀರ್ತಿ, ಸನ್ಮಾನ, ಅಧಿಕಾರ ಪಧವಿ, ಜ್ಯೇಷ್ಠತೆ ಇತ್ಯಾದಿ ನೀಡುವ ಕ್ಷೇತ್ರ. ಪಂಚಮವು ಸಂತಾನ, ವಿದ್ಯೆ, ಉತ್ಪತ್ತಿ, ಹೃದಯ, ಉಪಾಸನೆಯ ಸೂಚಕವಾಗುತ್ತದೆ. ಪಂಚಮ ಧನು ರಾಶಿಯಾದಾಗ ಇದು ಅಗ್ನಿತತ್ವ ರಾಶಿಯಾಗಿ ಇದೇ ಫಲಗಳನ್ನು ಪ್ರತಾಪ ರೂಪದಿಂದ ನೀಡುತ್ತದೆ. ಈ ಭಾವಗಳ ಫಲ ಉತ್ಪತ್ತಿಯನ್ನು ನೀಡುವವನೇ ಗುರು. ಬೇರೆ ಬೇರೆ ಗ್ರಹರು ಬೇರೆ ಶಕ್ತಿಗಳನ್ನಷ್ಟೇ ಉತ್ಪತ್ತಿ ಮಾಡುತ್ತಾರೆ. ಆದರೆ ಅವೆಲ್ಲ ಶಕ್ತಿಗಳ ಫಲ ನೀಡುವವನು ಗುರು ಮಾತ್ರ.

ಈ ಫಲಗಳು ಬೇರೆ ಬೇರೆ ಗ್ರಹರ ಗೋಚರ, ದಶಾಭುಕ್ತಿಗಳು, ಜಾತಕದ ಯೋಗಾಯೋಗಗಳ ಆಧಾರದಲ್ಲಿ ಇರುತ್ತದೆ. ಉದಾಹರಣೆಗೆ ಪಂಚಮವು ಸುತ ಸ್ಥಾನ ಆಗಿದ್ದರೂ, ಮಕ್ಕಳ ಯೋಗವೇ ಕುಂಡಲಿಯಲ್ಲಿ ಸೂಚಿಸದಿದ್ದಾಗ ಗುರು ಆ ಸ್ಥಾನಕ್ಕೆ ಬಂದಾಗ ಪುತ್ರಯೋಗ ನೀಡಲಾರ. ಯಾವುದೋ ಒಂದು ಮಗುವಿನ ಬಗ್ಗೆ ಪ್ರೀತಿಯನ್ನು ಕೊಡಬಹುದು. ಸಿಂಹರಾಶಿ ಜನಿತ ಮುದುಕ ಮುದುಕಿಯರಿಗೂ ಗುರು ಪಂಚಮಕ್ಕೆ ಬಂದಾಗ ಸಂತಾನ ಆಗುತ್ತದೆ ಎಂದು ಹೇಳುವುದು ಸರಿಯಾಗುತ್ತದೆಯೇ? ಅಲ್ಲಿ ಆ ಸ್ಥಾನವು ಕೇವಲ ಮಕ್ಕಳಾಗುತ್ತದೆ ಎಂಬುದಕ್ಕಲ್ಲ. ಅದೊಂದು ಉತ್ಪತ್ತಿ ಸ್ಥಾನವಷ್ಟೆ. ನಮ್ಮ ಯೋಗಕ್ಕನುಸಾರವಾಗಿ ಉತ್ಪತ್ತಿಯಾಗುತ್ತದೆ.

ಈಗ ಗುರುವಿನ ಧನು ರಾಶಿ ಸಂಚಾರದವ ಫಲ ಹೇಗಿದೆ ನೋಡೋಣ.

29.3.2019 ಬೆಳಗಿನ ಜಾವ ಧನುರಾಶಿ ಪ್ರವೇಶಿಸಿದ ಗುರುವು ಕೆಲವೇ ದಿನಗಳಲ್ಲಿ(ಇನ್ನೂ ಒಂದು ಡಿಗ್ರಿ ಕ್ರಮಿಸುವ ಮೊದಲೇ) ಮತ್ತೆ U TURN ತೆಗೆದುಕೊಂಡು 23.4.2019 ಕ್ಕೆ ಮತ್ತೆ ವೃಶ್ಚಿಕ ರಾಶಿಗೆ ಬರುತ್ತಾನೆ. ಅಲ್ಲಿ ಮತ್ತೆ 4.11.2019 ರ ವರೆಗಿದ್ದು Nov 5 ತಾರೀಕಿಗೆ ಮತ್ತೆ ಧನುರಾಶಿ ಪ್ರವೇಶ. ಸುಮಾರು ಹತ್ತು ಡಿಗ್ರಿ ವೃಶ್ಚಿಕಕ್ಕೆ ಕೇವಲ ನಾಲ್ಕು ತಿಂಗಳಲ್ಲಿ ಹಿಂದೆ ಬರುತ್ತಾನೆ. ಧನು ರಾಶಿಯ 30° ದೂರವನ್ನು ಕೇವಲ 4 ತಿಂಗಳಲ್ಲಿ ಅತ್ಯಂತ ವೇಗವಾಗಿ ಮುಗಿಸಿ 29.3.2020 ಕ್ಕೆ ಮಕರಕ್ಕೆ ಬರುತ್ತಾನೆ.

ಇದೊಂದು ರೀತಿಯ ಘನ ವಾಹನವನ್ನು ಹಿಂದೆ ಮುಂದೆ, U turn ಮಾಡುತ್ತಾ ಸಾಗುವಂತಾಗುತ್ತದೆ. ಇದನ್ನೇ ಅತಿಚಾರ ಫಲ ಎನ್ನುವುದು. ಇಷ್ಟು ದೊಡ್ಡ ಗಾತ್ರದ, ಭಾವೋತ್ಪತ್ತಿ ಕಾರಕ ಗುರುವು, ನೈಸರ್ಗಿಕ ಮೇಷ ಲಗ್ನದ ಭಾಗ್ಯಸ್ಥಾನವಾದ, ತನ್ನ ಮೂಲ ತ್ರಿಕೋಣದಲ್ಲಿ ಅತಿಚಾರದಲ್ಲಿ ಸಂಚರಿಸಿದ ಪರಿಣಾಮಗಳು, ಭೂಮಿ ಮತ್ತು ಭೂಮಿಯ ಸಕಲ ಚರಾಚರಗಳ ಮೇಲೆ ಪರಿಣಾಮ ಯಾವ ರೀತಿಯಲ್ಲಿ ಬೀರಬಹುದು ಯೋಚಿಸಿ. ಗರ್ಭಿಣಿಯರು Premature Baby, ಸಂತಾನ ನಷ್ಟ, ಅತಿಮಾನುಷ ಬುದ್ಧಿಯ ಮಕ್ಕಳ ಜನನವನ್ನು ಸೂಚಿಸುತ್ತದೆ. ಸ್ವರೂಪಗಳು ಅವರವರ ಜಾತಕದ ಆಧಾರದಲ್ಲಿರುತ್ತದೆ.

ಇನ್ನೊಂದೆಡೆ ಈ ವರೆಗೆ ಅಂದರೆ ಗುರುವು ಕ್ರಮಿಸಿದ ಭಾವಗಳಿಗೆ ಒಂದು Final Judgement ನೀಡುವ ಕಾಲ. ಗುರು ಶನಿ ಯೋಗ, ಗುರು ಕೇತು ಯೋಗ, ಶನಿ ಕೇತು ಯೋಗಗಳು ವಿಪರೀತ ಕ್ರಿಯೆ ಮಾಡುತ್ತದೆ. ಕೇತುವಿನಿಂದ ವೇದ ವಿರೋಧಿಯವನರ ಚಿಂತನೆ ಮಾಡುತ್ತಾರೆ. ಅಂದರೆ ಮತಾಂಧರ ಅಹಂಕಾರ ಒಂದೆಡೆ ಏರುವುದೂ, ಇನ್ನೊಂದೆಡೆ ಅವರ ಸಂಹಾರವೂ ಆಗಲಿದೆ ಎಂಬುದರ ಸೂಚನೆ ಅಥವಾ ಪ್ರೇರಣೆಯಾಗುತ್ತದೆ.

ಯಾವ್ಯಾವ ರಾಶಿಗೆ ಏನೇನು ಫಲ?

ಮೇಷ, ಮಿಥುನ, ಸಿಂಹ, ಕುಂಭ ರಾಶಿಗಳವರಿಗೆ ಶುಭ ಫಲವಿದೆ. ವೃಶ್ವಿಕ ರಾಶಿಯವರಿಗೂ ಶುಭ ಫಲವಿದೆ. ವೃಷಭ ರಾಶಿಯವರಿಗೆ ಮರಣ ಭಯ, ತುಲಾ ರಾಶಿಯವರಿಗೆ ಆತಂಕ ಭಯ, ಮಕರ ರಾಶಿಯವರಿಗೆ ವ್ಯಯದ ಫಲವಿದೆ. ಕರ್ಕರಾಶಿಯವರಿಗೆ Negativity ಜಾಸ್ತಿಯಾದೀತು. ಮೀನ ರಾಶಿಯವರಿಗೆ ವರ್ಗಾವಣೆ, ಉದ್ಯೋಗ ಪರಿವರ್ತನೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಇತ್ಯಾದಿ ಫಲಗಳಿವೆ. ಮಿಥುನ, ತುಲಾ ರಾಶಿ ಜನಿತರಿಗೆ ವಿವಾಹ ಯೋಗವಿದೆ(ಅವಿವಾಹಿತರಿಗೆ) ವೃಷಭ, ಕನ್ಯಾ, ಮೀನ ರಾಶಿ ಜನಿತರಿಗೆ ಭೂ ಖರೀದಿ, ವಾಹನ ಖರೀದಿ ಮತ್ತು ಮಾರಾಟ ಮಾಡುವ ಯೋಗ ಭಾಗ್ಯ ಲಭಿಸಲಿದೆ. ಧನುರಾಶಿಯವರಿಗೆ ಸಂತಾನ ಯೋಗ ,ವಿವಾಹ ಯೋಗ, ಆರೋಗ್ಯ ವ್ಯತ್ಯಯಗಳಿವೆ.

ಒಟ್ಟಿನಲ್ಲಿ ಅನನುಕೂಲ ಇರುವವರು ಇದೊಂದು ಅನುಕೂಲತೆಯ ಮುನ್ಸೂಚನೆ, ಎಂದು ಯೋಚಿಸಿ ಜೀವನ ನಡೆಸಿದರೆ ಯಾವ ಗ್ರಹರೂ ಅನಿಷ್ಟ ತರುವವರಲ್ಲ ಎಂಬ ಸತ್ಚಿಂತನೆ ಬರುತ್ತದೆ. ಒಂದು ಫಸಲು ಸಿಗಲು ಕೆಲವಾರು ತಿಂಗಳ ಶ್ರಮ ಇರುವಂತೆಯೇ ಗ್ರಹರ ಭಾವ ಸಂಚಾರವೂ ಆಗಿರುತ್ತದೆ. ಇದನ್ನೇ ಅಚ್ಛೇದಿನ್ ಆಯೇಗಾ ಎಂದು ಬಲ್ಲವರು ಹೇಳಿದ್ದು.

ಪರಿಹಾರ ಇಲ್ಲದ ರೋಗಗಳಿಲ್ಲ. ಆದರೆ ಭಯ ರಹಿತವಾಗಿ ಇದ್ದಾಗ ಪರಿಹಾರವೂ ಪರಿಪೂರ್ಣವಾಗುತ್ತದೆ.  ಭಯದಿಂದ ವೈದ್ಯರ ಬಳಿಹೋದಾಗ ಭಯವನ್ನೇ ಅವರಲ್ಲಿರುವ ವೈದ್ಯಕೀಯ ಯಂತ್ರಗಳು ಸ್ಕ್ಯಾನ್ ಮಾಡುತ್ತವೆ ಎಂಬುದು ಸತ್ಯ.

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: AstrologyKannada ArticlePrakash AmmannayaU turnಗುರುವಿನ ಧನು ರಾಶಿ ಸಂಚಾರಛಾಪೇ ಗುರುಃಜ್ಯೋರ್ತಿವಿಜ್ಞಾನಂಧನು ರಾಶಿಪ್ರಕಾಶ್ ಅಮ್ಮಣ್ಣಾಯ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗಡಿಯಲ್ಲಿ ಇಬ್ಬರು ಉಗ್ರರನ್ನು ಬೇಟೆಯಾಡಿದ ಸೇನೆ

Next Post

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆ: ವಯೋವೃದ್ಧರಿಗೆ ಯಶಸ್ವಿ ಲಿಥೊಟ್ರಿಪ್ಸಿ ಚಿಕಿತ್ಸೆ

kalpa News

kalpa News

Next Post
ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆ: ವಯೋವೃದ್ಧರಿಗೆ ಯಶಸ್ವಿ ಲಿಥೊಟ್ರಿಪ್ಸಿ ಚಿಕಿತ್ಸೆ

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆ: ವಯೋವೃದ್ಧರಿಗೆ ಯಶಸ್ವಿ ಲಿಥೊಟ್ರಿಪ್ಸಿ ಚಿಕಿತ್ಸೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL