ಕಲ್ಪ ಮೀಡಿಯಾ ಹೌಸ್ | ಛತ್ತೀಸ್‌ಗಢ |
ಛತ್ತೀಸ್‌ಗಢದಲ್ಲಿ ನಕ್ಸಲರು ವಿಧ್ವಂಸಕ ಕೃತ್ಯ ನಡೆಸಿದ್ದು, ಐಇಡಿ ಸ್ಫೋಟಿಸಿ IED Blast ಹತ್ತು ಪೊಲೀಸರು ಹಾಗೂ ಓರ್ವ ಚಾಲಕನನ್ನು ಹತ್ಯೆ ಮಾಡಿದ್ದಾರೆ.
#WATCH | Visuals from the spot in Dantewada where 10 DRG jawans and one civilian driver lost their lives in an IED attack by naxals. #Chhattisgarh pic.twitter.com/GD8JJIbEt2
— ANI (@ANI) April 26, 2023
ಆರನ್‌ಪುರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಡಿಆರ್‌ಜಿ (ಜಿಲ್ಲಾ ಮೀಸಲು ಪಡೆ) ಸಿಬ್ಬಂದಿಗಳು ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಕ್ತಾಯಗೊಳಿಸಿ ಹಿಂದಿರುಗುತ್ತಿದ್ದ ವೇಳೆ ನಕ್ಸಲರು ಈ ಧಾಳಿ ನಡೆಸಿದ್ದಾರೆ.
ಸುಧಾರಿತ ಸ್ಫೋಟಕ 50ಕೆಜಿ ಐಇಡಿ ಬಳಸಿ ಭದ್ರತಾ ಪಡೆಗಳು ಸಂಚರಿಸುತ್ತಿದ್ದ ವಾಹನವನ್ನು ಸ್ಫೋಟಿಸಿರುವ ಪರಿಣಾಮ ಹತ್ತು ಭದ್ರಾತಾ ಸಿಬ್ಬಂದಿಗಳು ಹಾಗೂ ಓರ್ವ ವಾಹನ ಚಾಲಕ ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ.
ಸ್ಪೋಟದ ತೀವ್ರತೆಗೆ ಭದ್ರತಾ ಸಿಬ್ಬಂದಿಗಳು ಸಂಚರಿಸುತ್ತಿದ್ದ ವಾಹನ ಸಂಪೂರ್ಣ ಚಿದ್ರವಾಗಿದ್ದು, ಸ್ಫೋಟಗೊಂಡ ಸ್ಥಳ ಸುಮಾರು ನಾಲ್ಕರಿಂದ ಐದು ಅಡಿಗಳಷ್ಟು ಕಂದಕ ನಿರ್ಮಾಣವಾಗಿದೆ.
ಘಟನೆ ನಡೆದ ವ್ಯಾಪ್ತಿ ಅರಣ್ಯ ಪ್ರದೇಶವಾಗಿದ್ದು, ಈ ಭಾಗದಲ್ಲಿ ಅಡಗಿರುವ ನಕ್ಸಲರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ.
ಘಟನೆ ಕುರಿತಂತೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ PM Narendra Modi ಹುತಾತ್ಮರಾದ ಭದ್ರತಾ ಸಿಬ್ಬಂದಿಗಳ ಆತ್ಮಕ್ಕೆ ಶಾಂತಿ ಕೋರುತ್ತೇನೆ. ನಿಮ್ಮ ಈ ತ್ಯಾಗ ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಹುತಾತ್ಮರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post