ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಗಳೂರು: ಮಂಗಳೂರು ನಗರದ ಹೃದಯ ಭಾಗದಲ್ಲಿ ಕಾಡುಕೋಣ ಕಾಣಿಸಿಕೊಂಡಿದೆ. ಕುದ್ರೋಳಿ ಸಮೀಪದ ವಿಶಾಲ್ ನರ್ಸಿಂಗ್ ಹೋಂ ಪರಿಸರದಲ್ಲಿ ಇಂದು ಬೆಳಗ್ಗೆ ಕಾಣಿಸಿಕೊಂಡ ಕಾಡುಕೋಣ ಬಳಿಕ ಅಲ್ಲಿಂದ ಲೇಡಿಹಿಲ್ ಕಡೆಗೆ ಹೋಗಿದೆ ಎಂದು ಸ್ಥಳೀಯರು ತಿಳಿಸಿದಾರೆ.
ಕಾಡುಕೋಣದ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಜೋಕಟ್ಟೆ ಸಮೀಪದ ಕಾಡಿನಿಂದ ಇದು ನಗರದೊಳಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಜೋಕಟ್ಟೆ ಕಾಡಿನಲ್ಲಿ ಕಾಡುಕೋಣ, ಚಿರತೆಯಂತಹ ವನ್ಯಮೃಗಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ.
ಲಾಕ್‌ಡೌನ್ ಕಾರಣದಿಂದ ಜನರ ಸಂಚಾರ ಕಡಿಮೆಯಾದ ಕಾರಣ ವನ್ಯಜೀವಿಗಳು ರಸ್ತೆಗಳಲ್ಲಿ, ಜನ ವಾಸ್ತವ್ಯದ ಪ್ರದೇಶಗಳಲ್ಲಿ ನಿರ್ಭಯವಾಗಿ ಓಡಾಡುವ ಸುದ್ದಿಗಳು, ಚಿತ್ರಗಳು, ವೀಡಿಯೋ ಕ್ಲಿಪಿಂಗ್‌ಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಮಗೆಲ್ಲ ಗೊತ್ತೇ ಇದೆ.
ಅವುಗಳ ಸಾಲಿಗೆ ಈಗ ಇದೂ ಸೇರ್ಪಡೆಯಾಗಿದೆ. ಮಂಗಳೂರು ನಗರದ ಹೃದಯಭಾಗಕ್ಕೆ ಕಾಡುಕೋಣವೊಂದು ಆಗಮಿಸಿದ ಚಿತ್ರವೊಂದು ಹರಿದಾಡುತ್ತಿದೆ.
Get in Touch With Us info@kalpa.news Whatsapp: 9481252093
Discussion about this post