ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಆಟವಾಡಿದ್ದು ಸಾಕು, ಓದಿಕೋ ಹೋಗು ಎಂದು ತಂದೆ ಬೈದಿದ್ದಕ್ಕೆ 9 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.
ಈ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದ್ದು, ಬಾಲಕಿ ತನ್ನ ಮನೆಯ ಬಳಿ ಆಟವಾಡಿಕೊಂಡಿದ್ದಳು. ಇದನ್ನು ನೋಡಿದ ತಂದೆ ಆಡಿದ್ದು ಸಾಕು, ಹೋಗಿ ಓದಿಕೋ ಎಂದು ಬೈದು, ಮನೆಯ ಬೀಗದ ಕೈಯನ್ನು ಆಕೆಯ ಕೈಗೆ ನೀಡಿ ಹೊರ ಹೋಗಿದ್ದಾರೆ.
ತಂದೆ ಮನೆಗೆ ವಾಪಾಸ್ ಬಂದಾಗ ಒಳಗಿನಿಂದ ಚಿಲಕ ಹಾಕಿದ್ದನ್ನು ಗಮನಿಸಿ, ಮಗಳನ್ನು ಕೂಗಿದ್ದಾರೆ. ಆದರೆ, ಎಷ್ಟೇ ಕರೆದರು ಆಕೆ ಪ್ರತಿಕ್ರಿಯಿಸಿಲ್ಲ. ಇದರಿಂದ ಗಾಬರಿಗೊಂಡ ಅವರು ಕಿಟಕಿ ಒಡೆದು ಒಳ ಹೋಗಿ ನೋಡಿದ್ದಾರೆ. ಈ ವೇಳೆ ಬಾಲಕಿ ಟವೆಲ್’ನಿಂದ ನೇಣು ಬಿಗಿದುಕೊಂಡಿರುವ ದೃಶ್ಯ ಕಂಡು ಬಂದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಆಸ್ಪತ್ರೆಗೆ ಕರೆದೊಯ್ದರೂ ಆಕೆ ಬದುಕುಳಿಯಲಿಲ್ಲ ಎಂದು ವರದಿಯಾಗಿದೆ.
Also read: 14ನೆಯ ಮಹಡಿಯಿಂದ ಆಯತಪ್ಪಿ ಬಿದ್ದ ಯುವಕ ಸಾವು: ಘಟನೆ ನಡೆದಿದ್ದೆಲ್ಲಿ?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















