ಕಲ್ಪ ಮೀಡಿಯಾ ಹೌಸ್
ಚೆನ್ನೈ: ಧನುಷ್ ಸಿನಿಮಾದ ಚಿತ್ರೀಕರಣ ವೇಳೆ ನಟ ಪ್ರಕಾಶ್ ರೈಗೆ ಗಾಯವಾಗಿದ್ದು, ಅವರನ್ನು ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ತತಕ್ಷಣವೇ ಅವರನ್ನು ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಂದು ಸಂಜೆ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ವರದಿಯಾಗಿದೆ.
A small fall.. a tiny fracture.. flying to Hyderabad into the safe hands of my friend Dr Guruvareddy for a surgery. I will be fine nothing to worry .. keep me in your thoughts 😊😊😊🤗🤗🤗
— Prakash Raj (@prakashraaj) August 10, 2021
ಈ ಕುರಿತಂತೆ ಸ್ವತಃ ಟ್ವೀಟ್ ಮಾಡಿರುವ ಪ್ರಕಾಶ್ ರೈ ಚಿತ್ರೀಕರಣದ ವೇಳೆ ಕೆಳಗೆ ಬಿದ್ದ ಪರಿಣಾಮ ಸಣ್ಣ ಪ್ರಮಾಣದ ಮೂಳೆ ಮುರಿತ ಉಂಟಾಗಿದೆ. ನಾನು ಹೈದರಾಬಾದ್ಗೆ ತೆರಳುತ್ತಿದ್ದು, ನನ್ನ ಸ್ನೇಹಿತರಾದ ಡಾ. ಗೌರವ್ ರೆಡ್ಡಿ ಅವರು ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ. ನಾನು ಆರೋಗ್ಯದಿಂದ ಇದ್ದು, ಯಾರೂ ಹೆದರುವ ಅಗತ್ಯವಿಲ್ಲ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲೆ ಇರಲಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post