ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಚೆನ್ನೈ ವಿಭಾಗದಲ್ಲಿ ಪೆಟ್ರೋಲಿಯಂ ಹೊಂದಿದ್ದ ಬೋಗಿ ವ್ಯಾಗನ್ ಹೊತ್ತಿ ಉರಿದಿದ್ದು ಈ ಹಿನ್ನೆಲೆಯಲ್ಲಿ ಎರಡು ರೈಲುಗಳ ಸಂಚಾರವನ್ನು ಇಂದು ರದ್ದು ಮಾಡಲಾಗಿದೆ.
ಈ ವಿಭಾಗದಲ್ಲಿ ಪೆಟ್ರೋಲಿಯಂ ಹೊತ್ತಿರುವ ಬೋಗಿ ವ್ಯಾಗನ್ ಪತನಗೊಂಡು ಬೆಂಕಿ ಹೊತ್ತಿಕೊಂಡು ಉರಿದಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎರಡು ರೈಲುಗಳ ಸಂಚಾರವನ್ನು ಇಂದು ರದ್ದು ಮಾಡಲಾಗಿದೆ.
ದಕ್ಷಿಣ ರೈಲ್ವೆಯು ಈ ಕೆಳಕಂಡ ರೈಲು ಸೇವೆಗಳನ್ನು ಇಂದಿಗೆ (13.07.2025) ರದ್ದುಗೊಳಿಸಿದೆ:
- ರೈಲು ಸಂಖ್ಯೆ 20607 – ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು ವಂದೇ ಭಾರತ್ ಎಕ್ಸ್’ಪ್ರೆಸ್, 13.07.2025 ರಂದು ರದ್ದುಗೊಂಡಿದೆ.
- ರೈಲು ಸಂಖ್ಯೆ 12007 – ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು ಶತಾಬ್ದಿ ಎಕ್ಸ್’ಪ್ರೆಸ್, 13.07.2025 ರಂದು ರದ್ದುಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post