ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ದಕ್ಷಿಣ ಭಾರತದ ಸ್ಟೈಲ್ ಕಿಂಗ್, ಕಾಲಿವುಡ್ ಜನಪ್ರಿಯ ನಟ ರಜನಿಕಾಂತ್ ಅವರಿಗೆ ಇಂದು ದೆಹಲಿಯಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದರು.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೇಂದ್ರ ಸರ್ಕಾರ ಘೋಷಿಸಿದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಸ್ವೀಕರಿಸಿ ಮಾತನಾಡಿ, ತಮಗೆ ಲಭಿಸಿರುವ ಈ ಪ್ರಶಸ್ತಿಯನ್ನು ತಮ್ಮ ಗುರು, ಖ್ಯಾತ ನಿರ್ದೇಶಕ ದಿ. ಕೆ ಬಾಲಚಂದರ್ ಅವರಿಗೆ ಅರ್ಪಿಸುವುದಾಗಿ ತಿಳಿಸಿದರು.
ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಅವರು ತಂದೆಯ ಸ್ಥಾನದಲ್ಲಿದ್ದು ನನಗೆ ಉತ್ತಮ ಮೌಲ್ಯಗಳನ್ನು ಕಲಿಸಿದ್ದಾರೆ. ನನ್ನ ಸ್ನೇಹಿತ, ಚಾಲಕ ಮತ್ತು ಸಾರಿಗೆ ಸಹೋದ್ಯೋಗಿ ರಾಜ್ ಬಹದ್ದೂರ್ ಅವರು ನನ್ನಲ್ಲಿರುವ ನಟನಾ ಪ್ರತಿಭೆಯನ್ನು ಗುರುತಿಸಿ ಸಿನಿಮಾ ಸೇರುವಂತೆ ಪ್ರೋತ್ಸಾಹಿಸಿದರು ಎಂದು ಹೇಳಿದರು.
ತಾನು ಈ ಗೌರವಯುತ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗುತ್ತಿದೆ. ತಮಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿದ ಸರ್ಕಾರಕ್ಕೆ, ತಮ್ಮ ಅಭಿಮಾನಿಗಳು, ಚಲನಚಿತ್ರ ನಿರ್ಮಾಪಕರು, ಸಹೋದ್ಯೋಗಿಗಳು ಮತ್ತು ಐದು ದಶಕಗಳಲ್ಲಿ ಅವಿರತ ಬೆಂಬಲ ನೀಡಿದ ತಮಿಳು ಜನರಿಗೆ ರಜನಿಕಾಂತ್ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post