ಕಲ್ಪ ಮೀಡಿಯಾ ಹೌಸ್ | ಚೆನೈ |
ಭಾರತೀಯ ಕರಾವಳಿ ಕಾವಲು ಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ.
ಐಸಿಜಿ ಕಾರ್ಯಕ್ರಮವೊಂದರಲ್ಲಿ ರಕ್ಷಣಾ ಸಚಿವರನ್ನು ಭೇಟಿ ಮಾಡಬೇಕಿದ್ದ ರಾಕೇಶ್ ಭಾನುವಾರ ಬೆಳಿಗ್ಗೆ ನಡೆದ ಅಧಿಕಾರಿಗಳ ಸಭೆ ಮಧ್ಯೆ ಅಸ್ವಸ್ಥರಾದ ಹಿನ್ನೆಲೆ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ಇಹಲೋಕ ತ್ಯಜಿಸಿದ್ದಾರೆ.
ತಮ್ಮ 34 ವರ್ಷಗಳ ಸೇವಾವಧಿಯಲ್ಲಿ ರಾಕೇಶ್ ಅವರು ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ವಾಯವ್ಯ ವಿಭಾಗ ಕರಾವಳಿ ಕಾವಲು ಪಡೆಯ ಕಮಾಂಡರ್ ಆಗಿ, ನೀತಿ ಮತ್ತು ಯೋಜನಾ ವಿಭಾಗದ ಉಪ ಮಹಾನಿರ್ದೇಶಕರಾಗಿ, ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವುಗಳಲ್ಲಿ ಪ್ರಮುಖವಾಗಿ ಕರಾವಳಿ ಕಾವಲು ವಲಯ (ಉತ್ತರ ಪಶ್ಚಿಮ) ಕಮಾಂಡರ್, ಉಪ ನಿರ್ದೇಶಕ ಜನರಲ್ (ನೀತಿ ಮತ್ತು ಯೋಜನೆಗಳು) ಮತ್ತು ದೆಹಲಿಯ ಕರಾವಳಿ ಕಾವಲು ಕೇಂದ್ರದಲ್ಲಿನ ಅಪರ ನಿರ್ದೇಶಕ ಜನರಲ್ ಹುದ್ದೆಗಳು ಸೇರಿವೆ. ರಾಕೇಶ್ ಪಾಲ್ ವಿಶಾಲ ಸಮುದ್ರ ಅನುಭವಕ್ಕೆ ಹೆಸರುವಾಸಿಯಾಗಿದ್ದು, ಸಮರ್ಥ, ವಿಜಿತ್, ಸುಚೇತಾ ಕೃಪಲಾನಿ, ಅಹಲ್ಯಾಬಾಯಿ ಮತ್ತು ಸಿ-03 ನಂತಹ ಎಲ್ಲಾ ವರ್ಗದ ಐಸಿಜಿ ಹಡಗುಗಳನ್ನು ಕಮಾಂಡ್ ಮಾಡಿದ್ದರು.
Also read: ಜ್ಯೋತಿಷ್ಯ ದೀಪ ಬದುಕಿಗೆ ಮಾರ್ಗದರ್ಶಿ: ರಾಘವೇಶ್ವರ ಶ್ರೀ
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ, ಪಾಲ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಕೋಸ್ಟ್ ಗಾರ್ಡ್ ನ 25 ನೇ ಮಹಾನಿರ್ದೇಶಕರಾಗಿದ್ದ ಪಾಲ್ ಅತ್ಯಂತ ಸಮರ್ಥ ಹಾಗೂ ಬದ್ಧತೆ ಹೊಂದಿದ್ದ ಅಧಿಕಾರಿಯಾಗಿದ್ದರು. ಭಾರತೀಯ ಕರಾವಳಿ ಕಾವಲು ಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರ ನಾಯಕತ್ವದಲ್ಲಿ ಐಸಿಜಿ, ದೊಡ್ಡ ಸಾಧನೆಗಳನ್ನು ಮಾಡಿದ್ದು, ಅವರು ಭಾರತೀಯ ಸಾಗರ ಭದ್ರತೆಯನ್ನು ಬಲಿಷ್ಠಗೊಳಿಸಿದ್ದರು. ಅವರ ದುಃಖತಪ್ತ ಕುಟುಂಬಕ್ಕೆ ಸಾಂತ್ವನಗಳು ಎಂದು ಸಿಂಗ್ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post