ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ದಕ್ಷಿಣ ಭಾರತದ ಖ್ಯಾತ ಚಿತ್ರನಟ ಡೇನಿಯಲ್ ಬಾಲಾಜಿ (48) #Denial Balaji ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಅವರ ನೇತ್ರಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
ಕಳೆದ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡ ಅವರನ್ನು ಚೆನ್ನೈನ ಕೊಟ್ಟಿವಾಕಂನಲ್ಲಿ ಆಸ್ಪತ್ರೆಗೆ ದಾಖಲಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಹೃದಯ ಸ್ತಂಭನದಿಂದ ಅವರು ಕೊನೆಯುಸಿರೆಳಿದ್ದಾರೆ.

Also read: ನೇತ್ರಾವತಿ ನದಿಯಲ್ಲಿ ತಾಯಿ-ಮಗುವಿನ ಮೃತದೇಹ ಪತ್ತೆ | ಆತ್ಮಹತ್ಯೆ ಶಂಕೆ
ನೇತ್ರದಾನ ಮಾಡಿದ ಕುಟುಂಬ
ಇನ್ನು, ಮೃತರಾದ ಬಾಲಾಜಿ ಅವರ ನೇತ್ರಗಳನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ. ನೇತ್ರದಾನ ಮಾಡುವುದು ಬಾಲಾಜಿ ಇಷ್ಟಪಡುತ್ತಿದ್ದು, ಬಹಳಷ್ಟು ಮಂದಿಗೆ ಈ ಬಗ್ಗೆ ತಿಳುವಳಿಕೆ ನೀಡಿದ್ದರು. ಅವರ ಇಚ್ಛೆಯಂತೆ ಕುಟುಂಬಸ್ಥರು ಬಾಲಾಜಿ ಅವರ ನೇತ್ರದಾನ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟ ಡೇನಿಯಲ್ ಬಾಲಾಜಿ ಬಹು ಭಾಷಾನಟನಾಗಿಯೂ ಗುರುತಿಸಿಕೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post