ಕಲ್ಪ ಮೀಡಿಯಾ ಹೌಸ್ | ಚೆನ್ನೈ/ಮಂಗಳೂರು |
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಚೆನ್ನೈ ಎಗ್ಮೋರ್–ಮಂಗಳೂರು (Chennai-Mangalore) ಸೆಂಟ್ರಲ್ ಹಾಗೂ ಮಂಗಳೂರು ಸೆಂಟ್ರಲ್–ರಾಮೇಶ್ವರಂ ನಡುವೆ ಏಕಮುಖ ಎಕ್ಸ್ಪ್ರೆಸ್ ವಿಶೇಷ (Express Train) ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ಅಧಿಸೂಚನೆ ಹೊರಡಿಸಿದೆ.
Chennai – Mangalore : ಚೆನ್ನೈ ಎಗ್ಮೋರ್–ಮಂಗಳೂರು ವಿಶೇಷ ರೈಲು
ರೈಲು ಸಂಖ್ಯೆ 06036 ಚೆನ್ನೈ ಎಗ್ಮೋರ್–ಮಂಗಳೂರು ಸೆಂಟ್ರಲ್ ಏಕಮುಖ ಎಕ್ಸ್ಪ್ರೆಸ್ ವಿಶೇಷ ರೈಲು ಅಕ್ಟೋಬರ್ 17ರಂದು ಶನಿವಾರ ರಾತ್ರಿ 11:55ಕ್ಕೆ ಚೆನ್ನೈ ಎಗ್ಮೋರ್ ನಿಲ್ದಾಣದಿಂದ ಹೊರಡಲಿದೆ. ಈ ರೈಲು ಅಕ್ಟೋಬರ್ 18ರಂದು ಭಾನುವಾರ ಸಂಜೆ 7:45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಮಾರ್ಗಮಧ್ಯೆ ಈ ರೈಲು ಪೆರಂಬೂರು, ತಿರುವಳ್ಳೂರು, ಅರಕ್ಕೋಣಂ ಜಂಕ್ಷನ್, ಕಾಟ್ಪಾಡಿ ಜಂಕ್ಷನ್, ಜೋಲಾರ್ಪೇಟೈ ಜಂಕ್ಷನ್, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರು, ಪೊದನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಶೋರನೂರು ಜಂಕ್ಷನ್, ತಿರೂರು, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು, ನೀಲೇಶ್ವರಂ, ಕನ್ಹಂಗಡ್ ಹಾಗೂ ಕಾಸರಗೋಡು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ಮಂಗಳೂರು–ರಾಮೇಶ್ವರಂ ವಿಶೇಷ ರೈಲು
ರೈಲು ಸಂಖ್ಯೆ 06142 ಮಂಗಳೂರು ಸೆಂಟ್ರಲ್–ರಾಮೇಶ್ವರಂ ಏಕಮುಖ ಎಕ್ಸ್ಪ್ರೆಸ್ ವಿಶೇಷ ರೈಲು ಅಕ್ಟೋಬರ್ 19ರಂದು ಸೋಮವಾರ ಬೆಳಿಗ್ಗೆ 4:15ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಡಲಿದೆ. ಅದೇ ದಿನ ಸಂಜೆ 7:30ಕ್ಕೆ ರಾಮೇಶ್ವರಂ ತಲುಪಲಿದೆ.

ಈ ರೈಲು ಕಾಸರಗೋಡು, ಕನ್ಹಂಗಡ್, ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ವಡಕರ, ಕೋಝಿಕ್ಕೋಡ್, ತಿರೂರು, ಶೋರನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಪಾಲಕ್ಕಾಡ್ ಟೌನ್, ಕೊಲ್ಲಂಗೋಡ್, ಪೊಲ್ಲಾಚಿ ಜಂಕ್ಷನ್, ಉದುಮಲೈಪೇಟೈ, ಪಳನಿ, ಒಟ್ಟಂಚತ್ರಂ, ದಿಂಡಿಗಲ್ ಜಂಕ್ಷನ್, ಮದುರೈ ಜಂಕ್ಷನ್, ಮನಮದುರೈ ಜಂಕ್ಷನ್, ಪರಮಕುಡಿ ಹಾಗೂ ರಾಮನಾಥಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
Also Read>> ಶಿವಮೊಗ್ಗ ದಸರಾ | ಪುರಾತನ ನಾಣ್ಯಗಳ ಪ್ರದರ್ಶನಕ್ಕೆ ಬಿ.ಎಸ್. ಯಡಿಯೂರಪ್ಪ ಚಾಲನೆ
21 ಬೋಗಿಗಳ ಸಂಯೋಜನೆ
ಎರಡೂ ವಿಶೇಷ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿರಲಿವೆ. ರೈಲುಗಳಲ್ಲಿ ಪ್ರಥಮ ದರ್ಜೆ ಎಸಿ, ಎಸಿ ಟು ಟಯರ್, ಎಸಿ ತ್ರಿ ಟಯರ್, ಸ್ಲೀಪರ್ ಕ್ಲಾಸ್ ಹಾಗೂ ಸಾಮಾನ್ಯ ದರ್ಜೆಯ ಬೋಗಿಗಳಿರಲಿವೆ.
ಇದರೊಂದಿಗೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳನ್ನೂ ಅಳವಡಿಸಲಾಗಿದ್ದು, ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಈ ವಿಶೇಷ ರೈಲುಗಳು ಸಹಕಾರಿಯಾಗಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













