ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾ Ayodhya Shri Rama ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಕಾಶಿ ಯಜ್ಞಶಾಲೆಯಲ್ಲಿ ಜ.22 ರಿಂದ 40 ದಿನಗಳ ವಿಶೇಷ ಯಾಗ ಆಯೋಜಿಸಲಾಗಿದೆ ಎಂದು ತಮಿಳುನಾಡಿನ ಕಾಂಚಿಪುರಂನ ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಸ್ವಾಮೀಜಿ Shankaracharya Viyanenra Saraswathi Swamiji of Kanchi Kamakoti Mutt Tamilnadu ತಿಳಿಸಿದ್ದಾರೆ.
ಶ್ರೀರಾಮನ ಆಶೀರ್ವಾದದೊಂದಿಗೆ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ಸಮಾರಂಭ ನಡೆಯಲಿದ್ದು, ಇದೇ ಸಮಯದಲ್ಲಿ ತಮಿಳುನಾಡಿನಲ್ಲಿರುವ ಕಾಶಿ ಯಜ್ಞಶಾಲೆಯಲ್ಲಿ ಜ.22 ರಿಂದ 40 ದಿನಗಳ ಕಾಲ 100ಕ್ಕೂ ಹೆಚ್ಚು ವಿದ್ವಾಂಸರು ಪೂಜೆ, ಹವನ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
Also read: ….ಅಂತಹ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ: ಸಿಎಂ ಸಿದ್ದರಾಮಯ್ಯ
ವೈದಿಕ ಆಚರಣೆಗಳನ್ನು ನಿರ್ವಹಿಸಲು ‘ಯಜ್ಞಶಾಲೆ’ಯನ್ನು ಬಳಸಲಾಗುತ್ತದೆ ಹಾಗೂ ಲಕ್ಷ್ಮೀಕಾಂತ ದೀಕ್ಷಿತ್ ಸೇರಿದಂತೆ ವೈದಿಕ ವಿದ್ವಾಂಸರು ಇದಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ವಿವರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post