ಕಲ್ಪ ಮೀಡಿಯಾ ಹೌಸ್
ಚೆನ್ನೈ: ತಮಿಳು ಚಿತ್ರರಂಗದ ಹಾಸ್ಯನಟ ವಿವೇಕ್ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹೃದಯಾಘಾತದಿಂದ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ವಿವೇಖ್ ಅವರ ಎಡ ಅಪಧಮನಿಯಲ್ಲಿ ಶೇ.100ರಷ್ಟು ರಕ್ತ ಹೆಪ್ಪುಗಟ್ಟಿತ್ತು. ಒಂದು ದಿನದ ಹಿಂದೆಯಷ್ಟೇ ಅವರು ಕೊರೋನಾ ಲಸಿಕೆ ಪಡೆದಿದ್ದ ಹಿನ್ನೆಲೆಯಲ್ಲಿ ಅವರ ಹೃದಯಾಘಾತಕ್ಕೂ ಕೋವಿಡ್ ವ್ಯಾಕ್ಸಿನೇಷನ್‌ಗೆ ಯಾವುದೇ ಸಂಬಂಧ ಇಲ್ಲವೆಂದು ಅವರು ದಾಖಲಾಗಿದ್ದ ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post