ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಇಬ್ಬರು ಬಾಲಕಿಯರ ಮೇಲೆ ಮೂವರು ಅಪ್ರಾಪ್ತರು ಸೇರಿ ಆರು ಮಂದಿ ಸಾಮೂಹಿಕ ಅತ್ಯಾಚಾರ #Gang Rape ನಡೆಸಿದ್ದು, ಇದರಲ್ಲಿ ಓರ್ವ ಬಾಲಕಿ ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡಿ ತಿರುಪ್ಪೂರ್’ನಲ್ಲಿ ಘಟನೆ ನಡೆದಿದ್ದು, ಅತ್ಯಾಚಾರಕ್ಕೆ ಒಳಗಾದ ಬಾಲಕಿಯರು 13 ಮತ್ತು 17 ವರ್ಷದವರಾಗಿದ್ದಾರೆ. 17 ವರ್ಷದ ಬಾಲಕಿ ಗರ್ಭಿಣಿಯಾದ ಬಳಿಕ ವಿಷಯ ಬೆಳಕಿಗೆ ಬಂದಿದೆ.
17ರ ಬಾಲಕಿ ಚಿಕ್ಕ ವಯಸ್ಸಿನಲ್ಲೇ ತನ್ನ ಪೋಷಕರನ್ನು ಕಳೆದುಕೊಂಡು ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದಳು. ಶಾಲೆಯನ್ನು ತೊರೆದು ಕೆಲಸಕ್ಕಾಗಿ ಹುಡುಕಾಡುತ್ತಿದ್ದಾಗ 15 ವರ್ಷದ ಬಾಲಕ ಆಕೆಯೊಂದಿಗೆ ಸ್ನೇಹವನ್ನು ಬೆಳೆಸಿದ್ದಾನೆ. ಬಳಿಕ ಕೆಲಸ ಕೊಡಿಸುವ ನೆಪದಲ್ಲಿ ಆಕೆಯನ್ನು ತನ್ನ ಸ್ನೇಹಿತರ ಬಳಿ ಕರೆದೊಯ್ದು ಸ್ನೇಹಿತರೊಂದಿಗೆ ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ.
ಇದೇ ರೀತಿ ಹಲವು ಬಾರಿ ಅತ್ಯಾಚಾರ ಮಾಡಿದ್ದು, 17 ವರ್ಷದ ಬಾಲಕಿ ಜೊತೆ 13 ವರ್ಷದ ಬಾಲಕಿಯೂ ಹೋಗಿದ್ದ ಸಂದರ್ಭ ಆಕೆಯ ಮೇಲೂ ಅತ್ಯಾಚಾರವೆಸಗಿದ್ದಾರೆ.
17 ವರ್ಷದ ಬಾಲಕಿ ತನ್ನ ಋತುಚಕ್ರ ಸರಿಯಾಗಿ ಆಗುತ್ತಿಲ್ಲ ಎಂದು ತಿಳಿದು ಚಿಕ್ಕಮ್ಮನ ಬಳಿ ಅತ್ಯಾಚಾರದ ವಿಷಯ ಹೇಳಿದ್ದಾಳೆ. ವಿಷಯ ತಿಳಿದ ಆಕೆಯ ಚಿಕ್ಕಮ್ಮ ಉಡುಮಲೈಪಟೈ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























