ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ಪರಸ್ಪರ ಪ್ರೀತಿಸಿದ್ದ ಒಂದೇ ಗ್ರಾಮದ ಹಿಂದೂ #Hindu ಯುವಕ ಹಾಗೂ ಮುಸ್ಲಿಂ #Muslim ಯುವತಿ ಮನೆಯವರ ವಿರೋಧದ ನಡುವೆಯೂ ಸಹ ವಿವಾಹವಾಗಿದ್ದು, ಪೊಲೀಸರ ರಕ್ಷಣೆ ಕೋರಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮೈಲಪನಹಳ್ಳಿಯ ನಾಗಾರ್ಜುನ ಹಾಗೂ ಫಸಿಯಾ ಎನ್ನುವವರು 2 ವರ್ಷದಿಂದ ಪ್ರೀತಿಸಿ, ಈಗ ಮದುವೆಯಾಗಿದ್ದಾರೆ.
Also Read>> ದೌರ್ಜನ್ಯಗಳ ನಡುವೆ ‘ಮಹಿಳಾ ದಿನಾಚರಣೆ’ ಆಚರಿಸುವುದು ಹೇಗೆ?
ಇವರಿಬ್ಬರ ಮದುವೆಗೆ #Marriage ಯುವತಿಯ ಪೋಷಕರ ವಿರೋಧ ಇದ್ದ ಕಾರಣ ಮನೆಯಿಂದ ಹೊರ ಹೋಗಿ ಮದುವೆಯಾಗಿದ್ದಾರೆ.

ಎರಡು ಕೆಡೆಯವರ ತಂದೆ-ತಾಯಿ ಬಂಧು ಬಳಗ ಕರೆಸಿ ಯುವತಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ ತಾನು ಇಷ್ಟಪಟ್ಟೇ ಮದುವೆಯಾಗಿದ್ದು ಆತನ ಜೊತೆಯಲ್ಲೇ ಜೀವನ ಮಾಡುವುದಾಗಿ ತಿಳಿಸಿದ್ದಾರೆ.
ಯುವತಿ ಹೇಳಿಕೆ ಬಳಿಕ ನೂತನ ದಂಪತಿಗೆ ರಕ್ಷಣೆ ನೀಡಿ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದ ಹಲವರಿಗೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post