ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ಕುಡಿದ ಅಮಲಿನಲ್ಲಿ ತನ್ನನ್ನು ಹೆತ್ತ ತಾಯಿಯ ಮೇಲೆಯೇ ಪಾಪಿ ಮಗನೊಬ್ಬ ಅತ್ಯಾಚಾರ ನಡೆಸಿರುವ ಭೀಕರ ಘಟನೆ ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.
ಕೃತ್ಯದ ಬಳಿಕ ತಂದೆ, ತಾಯಿಯ ಮೇಲೆ ತೀವ್ರವಾಗಿ ಹ¯್ಲೆ ನಡೆಸಿ ಇಬ್ಬರನ್ನೂ ಮನೆ ಹಿಂಭಾಗದ ತಿಪ್ಪೆಗೆ ಎಸೆದು ಆರೋಪಿ ಪರಾರಿಯಾಗಿದ್ದಾನೆ.
Also read: ಭೀಕರ ಅಪಘಾತ | ಗರ್ಭಿಣಿ ಸಾವು | ಹೊಟ್ಟೆ ಸೀಳಿ ಹೊರಬಿದ್ದು ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಹಸುಗೂಸು
ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಂದೆ, ತಾಯಿಯೊಂದಿಗೆ ವಾಸವಾಗಿದ್ದ ಆರೋಪಿ ಭಾನುವಾರ ರಾತ್ರಿ ಮದ್ಯದ ಅಮಲಲ್ಲಿ ಕೃತ್ಯವೆಸಗಿz್ದÁನೆ. ಆರೋಪಿಗೆ ಮದುವೆಯಾಗಿದ್ದು, ಪತ್ನಿ ಈತನಿಂದ ದೂರವಿದ್ದಳು ಎನ್ನಲಾಗಿದೆ.
ಡಿವೈಎಸ್ಪಿ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿAದ ಮಾಹಿತಿ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post