ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ಲೋಕಸಭಾ ಚುನಾವಣೆಗೆ #Lok Sabha Election ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಚಿಕ್ಕಬಳ್ಳಾಪುರದ ಒಂದೇ ಕುಟುಂಬದ 85 ಮಂದಿ ಏಕಕಾಲಕ್ಕೆ ಮತದಾನ ಮಾಡಿದ್ದು, ದಾಖಲೆ ಬರೆದಿದ್ದಾರೆ.
ನಗರದ ಬಾದಾಮ್ ಫ್ಯಾಮಿಲಿ ಎಂದೇ ಖ್ಯಾತವಾದ ಕುಟುಂಬಸ್ಥರು ಮತದಾನ ಮಾಡಿದ್ದು, ದೇಶಕ್ಕೇ ಮಾದರಿಯಾಗಿದ್ದಾರೆ. ಇಲ್ಲಿನ ವಾರ್ಡ್ ನಂ.19ರ ನಿವಾಸಿಗಳಾದ ಇವರು ಮತಗಟ್ಟೆ ಸಂಖ್ಯೆ 161ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಈ ಕುಟುಂಬದ ಹಿರಿಯರಿಂದ ಮೊದಲ್ಗೊಂಡು ಅರ್ಹ ಕಿರಿಯರವರೆಗೂ ಸಹ ಒಟ್ಟು 85 ಮಂದಿ ಮತದಾನ ಮಾಡಿದ್ದಾರೆ.
Also read: ಇವಿಎಂನಲ್ಲಿ ದೋಷವಿಲ್ಲ, ಬ್ಯಾಲೆಟ್ ವೋಟಿಂಗ್ ಮಾಡೋಕಾಗಲ್ಲ | ಸುಪ್ರೀಂ ಮಹತ್ವದ ಆದೇಶ
ಹಿಂದಿನ ಎಲ್ಲ ಚುನಾವಣೆಗಳಲ್ಲೂ ಸಹ ಈ ಕುಟುಂಬಸ್ಥರು ಏಕಕಾಲಕ್ಕೆ ಆಗಮಿಸಿ ಮತದಾನ ಮಾಡುವ ಮೂಲಕ ಮಾದರಿ ಸಂದೇಶವನ್ನು ಸಮಾಜಕ್ಕೆ ಸಾರುತ್ತಿದ್ದಾರೆ ಈ ಕುಟುಂಬಸ್ತರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post