ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಜಿಲ್ಲೆಯ ಬಸವನಹಳ್ಳಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಹೆಡೆಮುರಿ ಕಟ್ಟಿದ್ದು, ಮೂರು ಜಿಲ್ಲೆಗಳಲ್ಲಿ ಕಳ್ಳತನವಾಗಿದ್ದ ಒಟ್ಟು 17 ಬೈಕ್’ಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿಕ್ಕಮಗಳೂರು ನಗರದಲ್ಲಿ ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿದ್ದ ಹಿನ್ನೆಲೆಯಲ್ಲಿ ರಚಿಸಿದ್ದ ವಿಶೇಷ ಪೊಲೀಸ್ ತಂಡವು 3 ಜನ ಅಂತರ್ ಜಿಲ್ಲಾ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳಿಂದ ರೂ. 8.5 ಲಕ್ಷ ಬೆಲೆಯ 17 ಬೈಕ್ ಗಳು, ರೂ. 2.15 ನಗದು ಮತ್ತು ರೂ. 50 ಸಾವಿರ ಮೌಲ್ಯದ ಬೈಕ್ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
Also read: ಯಶವಂತಪುರ-ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು? ಕೇಂದ್ರ ಸಚಿವರೊಂದಿಗೆ ಚರ್ಚೆ ಆಗಿದ್ದೇನು?
ಎಲ್ಲೆಲ್ಲಿ ಬೈಕ್ ಕಳ್ಳತನ ಮಾಡಿದ್ದರು?
ಆರೋಪಿಗಳು ಚಿಕ್ಕಮಗಳೂರು ನಗರದಲ್ಲಿ 22, ಕಡೂರು ಪಟ್ಟಣದಲ್ಲಿ 1, ತರೀಕೆರೆ ಪಟ್ಟಣದಲ್ಲಿ 1, ಶಿವಮೊಗ್ಗ ನಗರದಲ್ಲಿ 2, ಭದ್ರಾವತಿಯಲ್ಲಿ 2 ಹಾಗೂ ದಾವಣಗೆರೆ ಜಿ¯್ಲೆಯಲ್ಲಿ 2 ಬೈಕ್’ಗಳನ್ನು ಕಳವು ಮಾಡಿದ್ದಾರೆ. ಅವುಗಳಲ್ಲಿ 17 ಬೈಕ್ ಸುಸ್ಥಿತಿಯಲ್ಲಿದ್ದು, 13 ಬೈಕ್ ಗಳನ್ನು ಗುಜರಿಗೆ ಮಾರಾಟ ಮಾಡಿದ್ದಾರೆ ಖದೀಮರು.
ಪತ್ತೆ ಕಾರ್ಯಾಚರಣೆಯಲ್ಲಿ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್’ಐ ಕಲೈಮಾರ್ ಮತ್ತು ಪಿಎಸ್’ಐ ಬಾಬುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಲಿಂಗಮೂರ್ತಿ, ಮಧಸೂಧನ್, ನಂಜಪ್ಪ, ಮಧುಕುಮಾರ್, ಪ್ರದೀಪ ಮತ್ತು ನವೀನ ಅವರುಗಳು ಪಾಲ್ಗೊಂಡಿದ್ದರು.
ಸಾರ್ವಜನಿಕರ ಗಮನಕ್ಕೆ
ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ರಾತ್ರಿ ವೇಳೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸದೇ, ಬೈಕ್ ನಲ್ಲಿ ಕೀ ಗಳನ್ನು ಬಿಡದಂತೆ, ಉತ್ತಮ ಗುಣಮಟ್ಟದ ಲಾಕ್ ಗಳನ್ನು ಹಾಗೂ ಬೈಕ್ ಜಿಪಿಎಸ್ ಟ್ರ್ಯಾಂಕಿಂಗ್ ಸಾಧನವನ್ನು ಅಳವಡಿಸಿಕೊಳ್ಳುವಂತೆ ಹಾಗೂ ದಾಖಲೆಗಳಿಲ್ಲದೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬಾರದಾಗಿ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post