ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಮಹಾತ್ಮ ಗಾಂಧಿಯನ್ನೇ ಕೊಂದವರು ನನ್ನನ್ನು ಬಿಡುತ್ತಾರಾ? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ Siddharamaiah ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬಾಸಪುರದಲ್ಲಿ ಮಾತನಾಡಿರುವ ಅವರು, ಮಹಾತ್ಮ ಗಾಂಧಿಯನ್ನೇ ಕೊಂದವರು ಇವರು. ಗಾಂಧಿಯನ್ನು ಗುಂಡಿಟ್ಟು ಕೊಂದವರನ್ನು ಬಿಜೆಪಿಯವರು ಪೂಜಿಸುತ್ತಾರೆ. ಇವರು ನನ್ನನ್ನು ಬಿಡುತ್ತಾರಾ ಎಂದಿದ್ದಾರೆ.
ಸಾವರ್ಕರ್ ವಿರುದ್ಧದ ಹೇಳಿಕೆ ನೀಡಿದ ನಂತರ ಸಿದ್ಧರಾಮಯ್ಯ ಹೋದ ಕಡೆಗಳಲ್ಲೆಲ್ಲಾ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಮಡಿಕೇರಿಯಲ್ಲಿ ಇಂದು ಚಿಕ್ಕಮಗಳೂರಿನಲ್ಲಿ ಸಿದ್ಧು ವಿರುದ್ಧ ಭಾರೀ ಪ್ರತಿಭಟನೆ ನಡೆಸಿ, ಗೋ ಬ್ಯಾಕ್ ಸಿದ್ಧು ಎಂಬ ಘೋಷಣೆಗಳನ್ನು ಕೂಗಲಾಗುತ್ತಿದೆ.
ಇನ್ನು, ನಿನ್ನೆ ನಮ್ಮ ವಿರುದ್ಧ ಪ್ರತಿಭಟನೆ ನಡೆಸಿ ಮೊಟ್ಟೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 26ರಂದು ಮಡಿಕೇರಿ ಎಸ್’ಪಿ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Also read: ಹೋದಲ್ಲೆಲ್ಲಾ ಪ್ರತಿಭಟನೆ ಬಿಸಿ: ಚಿಕ್ಕಮಗಳೂರಿನಲ್ಲಿ ಸಿದ್ಧರಾಮಯ್ಯಗೆ ಶ್ವಾನದಳ ಸೇರಿ ಭಾರೀ ಪೊಲೀಸ್ ಭದ್ರತೆ
ಸಿಎಂ ಹಾಗೂ ಮಂತ್ರಿಗಳು ಬಂದರೆ ಇದೇ ರೀತಿ ಸುಮ್ಮನಿರುತ್ತೀರಾ ಎಂದು ಪೊಲೀಸರ ವಿರುದ್ಧ ಕಿಡಿ ಕಾರಿರುವ ಸಿದ್ಧರಾಮಯ್ಯ, ಪ್ರತಿಭಟನೆ ಮಾಡಿದವರನ್ನು ಹಿಡಿದು ಒಳಗೆ ಹಾಕಲು ಆಗುತ್ತಿರಲಿಲ್ಲವಾ? ಬಿಜೆಪಿಯವರು ಗೂಟ ಹೊಡೆದುಕೊಂಡು ಅಧಿಕಾರದಲ್ಲಿ ಇರುತ್ತಾರೆ ಎಂದುಕೊಂಡಿದ್ದೀರಾ? ಮುಂದಿನ ಭಾರಿ ನಾವು ಅಧಿಕಾರಕ್ಕೆ ಬರುತ್ತೇವೆ ನೆನಪಿರಲಿ ಎಂದು ಪೊಲೀಸ್ ಇಲಾಖೆ ವಿರುದ್ಧ ಕಿಡಿ ಕಾರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post