ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಕಾಫಿ ನಾಡು ಚಿಕ್ಕಮಗಳೂರಿನ #Chikkamagaluru ಮಲೆನಾಡು ಭಾಗದಲ್ಲಿ ಮತ್ತೆ ಅಕ್ರಮ ಶಿಕಾರಿ #Hunting ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮಿಸ್ ಫೈರ್ ಆಗಿ ಹೊರಹೊಮ್ಮಿದ ಬುಲೆಟ್’ಗೆ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಉಳುವಾಗಿಲು ಸಮೀಪದ ಕೆರೆಮಕ್ಕಿ ಯುವಕ ಸಂಜಯ್(33) ಎಂಬಾತನ ಮೃತದೇಹ ಇಲ್ಲಿಗೆ ಸಮೀಪದ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದ್ದು, ಬಂದೂಕಿನಿಂದ ಮಿಸ್ ಫೈರ್ #MisFire ಆದ ಗುಂಡೇಟಿನಿಂದ ಈತ ಸತ್ತಿದ್ದಾನೆ ಎಂದು ಹೇಳಲಾಗಿದೆ. ಆದರೂ, ಘಟನೆ ಅನುಮಾನಾಸ್ಪದವಾಗಿದೆ ಎಂದು ವರದಿಯಾಗಿದೆ.
ಕಾಡು ಹಂದಿ ಬೇಟೆಗೆ ತೆರಳಿದ ಯುವಕರ ನಡುವೆ ನಡೆದ ಮಿಸ್ ಕಮ್ಯುನಿಕೇಷನ್’ನಲ್ಲಿ ಫೈರ್ ಆಗಿದೆ ಎನ್ನಲಾಗಿದೆ.
ಇನ್ನು, ಸಂಜಯ್ ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿದ್ದು, ಆತನ ಎದೆಗೆ ತೋಟ ಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ.
ಮೃತದೇಹದ ಸಮೀಪವೇ ತೋಟದ ಬೇಲಿಯಲ್ಲಿ ತೋಟಕೋವಿಯೊಂದು ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.ಈ ದುರ್ಘಟನೆ ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಇದು ಆಕಸ್ಮಿಕವಾಗಿ ಗುಂಡು ತಗುಲಿ ಆಗಿರುವ ಸಾವೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ? ಎನ್ನುವ ಪ್ರಶ್ನೆಗಳ ಎದ್ದಿದ್ದು, ತನಿಖೆಯಿಂದ ಉತ್ತರ ದೊರೆಯಬೇಕಿದೆ.
Also read: ಬಿರಿಯಾನಿ ಪ್ರಿಯರೇ ಎಚ್ಚರ | ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿತ್ತು 3.5 ಸೆಮೀ ಉದ್ದದ ಮಟನ್ ಮೂಳೆ
ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post