ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ತನ್ನ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯಲ್ಲೇ ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಿದ್ದು, ಭಾರೀ ಮುಖಭಂಗವಾಗಿದೆ.
ಚಿಕ್ಕಮಗಳೂರು ಕ್ಷೇತ್ರದ ಹಾಲಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹ ಸೋಲನ್ನಪ್ಪಿದ್ದಾರೆ. ಇವರೂ ಸೇರಿದಂತೆ ಜಿಲ್ಲೆಯ 5 ಹಾಗೂ ಕೊಡಗಿನ 2 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.

ಸಿ.ಟಿ. ರವಿಗೆ ಭಾರೀ ಮುಖಭಂಗ
Also read: ಜನರೇ ನನ್ನ ಸ್ಟಾರ್ ಪ್ರಚಾರಕರು, ಅವರಿಂದಲೇ ಗೆದ್ದಿದ್ದೇನೆ: ಸಂಗಮೇಶ್ವರ್ ಸಂತಸ
ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಕ್ಷೇತ್ರಗಳಲ್ಲೂ ಬಿಜೆಪಿ ಹೀನಾಯವಾಗಿ ಸೋತಿದ್ದು, ಕಾಂಗ್ರೆಸ್ ಪಾರುಪತ್ಯ ಮೆರೆದಿದೆ. ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯಕರ್ಶಿ ಸಿ.ಟಿ. ರವಿ ಅವರೇ ವೈಯಕ್ತಿಕವಾಗಿ ಸೋತಿರುವುದು ಅಲ್ಲದೇ, ಅವರ ನಿಯಂತ್ರಣದಲ್ಲಿದ್ದ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನೂ ಕಳೆದುಕೊಂಡಿರುವುದು ಅವರಿಗೆ ಭಾರೀ ಮುಖಭಂಗವಾಗಿದೆ.

ಕೊಡಗಿನಲ್ಲಿ ಎರಡೂ ಕ್ಷೇತ್ರದಲ್ಲಿ ಸೋಲು ಜಿಲ್ಲೆಯಲ್ಲಿರುವ ಎರಡೇ ಕ್ಷೇತ್ರಗಳಲ್ಲಿ ಅಧಿಕಾರ ಹೊಂದಿದ್ದ ಬಿಜೆಪಿಯನ್ನು ಕಾಂಗ್ರೆಸ್ ಗುಡಿಸಿ ಹಾಕಿದೆ. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳು ಕಳೆದ ನಾಲ್ಕು ಅವಧಿಯಿಂದಲೂ ಬಿಜೆಪಿಯ ಹಿಡಿತದಲ್ಲಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಬಿಜೆಪಿಗೆ ಸೋಲಿನ ರುಚಿ ತೋರಿಸಲಾಗಿದೆ.
ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮಂಥರ್ ಗೌಡ ಬಿಜೆಪಿಯ ಅಪ್ಪಚ್ಚು ರಂಜನ್ ಅವರನ್ನು ಸೋಲಿಸಿ ಗೆಲುವಿನ ಪತಾಕೆ ಹಿಡಿದ್ದರೆ, ಬಿಜೆಪಿಯ ಕೆ. ಜಿ. ಬೋಪಯ್ಯ ಅವರನ್ನು ಕಾಂಗ್ರೆಸ್ ನ ಪೊನ್ನಣ್ಣ ಸೋಲಿಸಿ ಗೆಲುವಿನ ಕಿರೀಟ ಮುರಿಗೇರಿಸಿಕೊಂಡಿದ್ದಾರೆ.
ಚಿಕ್ಕಮಗಳೂರು: ಹೆಚ್ ಡಿ ತಮ್ಮಯ್ಯ
ಮೂಡಿಗೆರೆ: ನಯನಾ ಮೋಟಮ್ಮ
ತರೀಕೆರೆ: ಜಿ.ಹೆಚ್ ಶ್ರೀನಿವಾಸ್
ಕಡೂರು: ಕೆ.ಎಸ್ ಆನಂದ್
ಶೃಂಗೇರಿ: ಟಿ.ಡಿ ರಾಜೇಗೌಡ











Discussion about this post