ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಮಾಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ-1: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದೇವಸ್ಥಾನಗಳಲ್ಲಿ ಕಳವು ಮಾಡಿದ್ದ ಓರ್ವ ಆರೋಪಿಯನ್ನು ಕಡೂರು ಪೊಲೀಸ್ ತಂಡ ವಶಕ್ಕೆ ಪಡೆದಿದೆ.
Also Read>> ಸೌಜನ್ಯ ಪ್ರಕರಣ ವಿಡಿಯೋ | ಹಿಂದೂ ಧಾರ್ಮಿಕ ಕ್ಷೇತ್ರಗಳ ಅವಹೇಳನ | ವಿಹೆಚ್‌ಪಿ ಆಕ್ರೋಶ
ಈತನಿಂದ ರೂ. 1 ಲಕ್ಷ ಬೆಲೆಯ ಸ್ಕೂಟಿ, ಕಾಣಿಕೆ ಹುಂಡಿ ಮತ್ತು ಚಿಲ್ಲರೆ ಹಣ ವಶಪಡಿಸಿಕೊಂಡಿರುತ್ತಾರೆ. ಈತನ ಬಂಧನದಿಂದ ಜಿಲ್ಲೆಯಲ್ಲಿ 8 ಪ್ರಕರಣಗಳು ಪತ್ತೆಯಾಗಿದೆ.

ಪ್ರಕರಣ-2: ಚಿಕ್ಕಮಗಳೂರು ನಗರದ ಅಯ್ಯಪ್ಪನಗರದಲ್ಲಿರುವ ಮನೆಯಲ್ಲಿ 67 ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಕೇವಲ 24 ಗಂಟೆಗಳಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ.
Also read: ದೇವಾಲಯಗಳ ಅರ್ಚಕರು/ನೌಕರರ ವೇತನ ತಾರತಮ್ಯ | ನಿವೃತ್ತ ನ್ಯಾಯಾಧೀಶರ ಸಮಿತಿ ರಚನೆ | ಸಚಿವ ರಾಮಲಿಂಗಾರೆಡ್ಡಿ
ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಿದ ಪೊಲೀಸ್ ತಂಡದಲ್ಲಿ ಪಿಐ ಅಭಯ್ ಪ್ರಕಾಶ್ ಸೋಮನಾಳ್, ಪಿಎಸ್’ಐ ಬಾಬುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ದಿನೇಶ್, ನಂಜಪ್ಪ, ಎಚ್.ಜಿ. ಪ್ರದೀಪ, ಎ.ಎಸ್. ನವೀನ್, ಮಂಜುನಾಥ್ ನಾಯ್ಕ್ ಮತ್ತು ಮಹಮ್ಮದ್ ರಫೀಕ್ ಘಾಟಿ ರವರು ಕಾರ್ಯನಿರ್ವಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post