ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಕೆಲಸ ಮಾಡುತ್ತಿದ್ದ ತಯಾರಿಕಾ ಘಟಕದಲ್ಲಿಯೇ ಅಪಾರ ಪ್ರಮಾಣದ ಕಾಪರ್ ಸ್ಕ್ರಾಪ್ ಕಳ್ಳತನ ಮಾಡಿದ ಮೂವರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಂಪುರದಲ್ಲಿರುವ ಕಾಪರ್ ಸಲ್ಫೇಟ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಅದೇ ಸ್ಥಳದಲ್ಲಿ ಸುಮಾರು 16,320 ಕೆಜಿ ಕಾಪರ್ ಸ್ಕ್ರಾಪ್ ಕಳವು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ನಗರ ಪೊಲೀಸರ ತಂಡ ಮೂವರನ್ನು ಬಂಧಿಸಿದ್ದಾರೆ. 88.21 ಲಕ್ಷ ರೂ. ಮೌಲ್ಯದ 12,425 ಕೆಜಿ ಕಾಪರ್ ಸ್ಕ್ರಾಪ್ ಮತ್ತು 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Also read: ಶಕ್ತಿ ಯೋಜನೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಅಪಾರ ನಷ್ಟ | ವಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ
ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ತಂಡಲ್ಲಿ ಪಿಎಸ್’ಐಗಳಾದ ರವಿ ಜಿಎ, ಶಂಭುಲಿಂಗನಗೌಡ ಮತ್ತು ಸತೀಶ್ ಕೆ.ಎಸ್. ಹಾಗೂ ಪೊಲೀಸ್ ಸಿಬ್ಬಂದಿಗಳಾದ ನಂಜಪ್ಪ,ದಿನೇಶ್, ಪ್ರದೀಪ ಎಚ್.ಜಿ, ನವೀನ ಎಎಸ್, ಮಹಮ್ಮದ್ ರಫೀಕ್ ಮತ್ತು ರವೀಂದ್ರ ಅವರು ಕಾರ್ಯನಿರ್ವಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post