ಕಲ್ಪ ಮೀಡಿಯಾ ಹೌಸ್
ಚಿಕ್ಕಮಗಳೂರು: ಹಾಯ್ ಬೆಂಗಳೂರು ಪತ್ರಿಕೆಯಿಂದ ಖ್ಯಾತಿಪಡೆದಿದ್ದ ಹಿರಿಯ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ತೀವ್ರ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ಮೂಡಿಗೆರೆ ತಾಲೂಕು ಹೆಗ್ಗರವಳ್ಳಿಯ ಮನೆಯಲ್ಲಿ ತೀವ್ರ ಹೃದಯಾಘಾತಕ್ಕೊಗಾದ ಸುನೀಲ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹಾಯ್ ಬೆಂಗಳೂರು ಪತ್ರಿಕೆಯ ಹಿರಿಯ ವರದಿಗಾರರಾಗಿದ್ದ ಅವರು ಸಾಕಷ್ಟು ತನಿಖಾ ವರದಿಗಳನ್ನು ಮಾಡಿ ರಾಜ್ಯಾದ್ಯಂತ ಹೆಸರು ಮಾಡಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















