ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ದಂಡ ವಿಧಿಸಿದ್ದಕ್ಕೆ ವ್ಯಕ್ತಿಯೊಬ್ಬ ಜಡ್ಜ್ ಮೇಲೆ ಚಪ್ಪಲಿ ತೂರಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ವಿಭಾಗದಲ್ಲಿ ನಡೆದಿದೆ.
ಅರವಿಂದ ನಗರ ನಿವಾಸಿ ಲೋಕೇಶ್ ನ್ಯಾಯಧೀಶರ ಮೇಲೆ ಚಪ್ಪಲಿ ತೂರಿದ್ದು, ನಗರ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಕಳೆದ 1 ತಿಂಗಳ ಹಿಂದೆ ಕುಡಿದು ವಾಹನ ಚಲಾಯಿಸುತ್ತಿದ್ದ ವೇಳೆ ಲೋಕೇಶ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಬಳಿಕ ಪೊಲೀಸರು ಆತನಿಗೆ ಕೋರ್ಟ್‌ನಲ್ಲಿ ದಂಡ ಕಟ್ಟುವಂತೆ ಸೂಚಿಸಿದ್ದರು. ಇದಕ್ಕೆ ಆರೋಪಿ ಲೋಕೇಶ್ ದಂಡ ಕೂಡ ಕಟ್ಟಿದ್ದ. ಆದರೆ ದಂಡ ಕಟ್ಟಿದ ತಿಂಗಳ ಬಳಿಕ ಲೋಕೇಶ್ ಇಂದು ಕೋರ್ಟ್‌ಗೆ ಕುಡಿದು ಬಂದು, ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ.
Also read: ಅ.28ರಂದು ಹಂಪಿಯಲ್ಲಿ ಕೋಟಿಕಂಠ ಗಾಯನ ಬನ್ನಿ, ಭಾಗವಹಿಸಿ
ಕೂಡಲೇ ಅಲ್ಲಿದ್ದ ನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಲೋಕೇಶ್‌ನ ಈ ವರ್ತನೆ ನೋಡಿದ ಕೂಡಲೇ ಕೋರ್ಟ್‌ನಲ್ಲಿದ್ದ ವಕೀಲರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















