ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಇಬ್ಬರ ಬಾಲಕಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿ, ಆ ಮೂಲಕ ಅತ್ಯಾಚಾರಕ್ಕೆ ಕಾರಣವಾಗಿದ್ದ ಹತ್ತು ಮಂದಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಾರು ಈ ಬಾಲಕಿಯರು?
ಶಿವಮೊಗ್ಗದಲ್ಲಿ ಯುವಕನೊಂದಿಗೆ ಸುತ್ತಾಡಿಕೊಂಡಿದ್ದ ಬಾಲಕಿಯೊಬ್ಬಳು ಸುತ್ತಾಡಿಕೊಂಡಿದ್ದ ವೇಳೆ ಗಮನಿಸಿದ ಪೊಲೀಸರು ಆತನನ್ನು ಬಂಧಿಸಿದ್ದರು. ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಬಾಲಕಿಯರನ್ನು ಬಾಲ ಬಂದಿರಕ್ಕೆ ಒಪ್ಪಿಸಿದ್ದರು.
ಆದರೆ, ಈ ಬಾಲಕಿ ಇನ್ನೊಬ್ಬರ 14 ವರ್ಷದ ಬಾಲಕಿಯೊಂದಿಗೆ ಬಾಲ ಮಂದಿರದಿAದ ತಪ್ಪಿಕೊಂಡು ಹೋಗಿದ್ದಳು. ಇಬ್ಬರು ತಪ್ಪಿಸಿಕೊಂಡ ಬಗ್ಗೆ ದೂರು ಸಹ ದಾಖಲಾಗಿತ್ತು.
Also read: ಸಾಲ ಬಾಧೆ ತಾಳಲಾರದೆ ತುಮಕೂರು ಮಹಿಳೆ ತೀರ್ಥಹಳ್ಳಿಯಲ್ಲಿ ಆತ್ಮಹತ್ಯೆ
ಹೀಗೆ ತಪ್ಪಿಸಿಕೊಂಡ ಬಾಲಕಿಯರು ವೇಶ್ಯಾವಾಟಿಕೆ ನಡೆಸುವವರ ಸಂಪರ್ಕಕ್ಕೆ ಸಿಲುಕಿದ್ದಾರೆ. ಹೀಗೆ ಜಾಲಕ್ಕೆ ಸಿಲುಕಿದ ಬಾಲಕಿಯರ ಮೇಲೆ ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ಹಲವರಿಂದ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮಾಹಿತಿಯ ಅಧಾರದಲ್ಲಿ 10 ಮಂದಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post