ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ನಿಷೇಧಿತ ಫಾಲ್ಸ್ ಬಳಿಯಲ್ಲಿ ಹುಚ್ಚಾಟ ಮೆರೆದ ಯುವಕರ ಬಟ್ಟೆಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಸರಿಯಾಗಿ ಬುದ್ದಿ ಕಲಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಳಿಯ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಫಾಲ್ಸ್ #Falls ಅಪಾಯಕಾರಿಯಾಗಿದ್ದು, ಇಲ್ಲಿಗೆ ತೆರಳದಂತೆ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಆದರೆ, ಇದನ್ನು ಲೆಕ್ಕಿಸದೇ ಅಪಾಯಕಾರಿ ಜಾಗದಲ್ಲಿ ಯುವಕರು ಸ್ನಾನ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಎಚ್ಚರಿಕೆ ನೀಡಿದರೂ ಯುವಕರು ಮಾತು ಕೇಳಲಿಲ್ಲ. ಹೀಗಾಗಿ, ಯುವಕರು ಬಿಚ್ಚಿಟ್ಟಿದ್ದ ಬಟ್ಟೆಯಲ್ಲಿ ತೆಗೆದುಕೊಂಡು ಗಸ್ತು ವಾಹನದಲ್ಲಿ ಇರಿಸಿಕೊಂಡಿದ್ದಾರೆ.

Also read: ಶಿವಮೊಗ್ಗ | ಊರಿನ ಹಿತಕ್ಕಾಗಿ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟ ಮಹನೀಯ ಪವನ್ ಕುಮಾರ್
ಈ ಹಂತದಲ್ಲೂ ಪೊಲೀಸರೊಂದಿಗೆ ಯುವಕರು ವಾಗ್ವಾದ ನಡೆಸಿದ್ದಾರೆ. ಆದರೆ, ಪೊಲೀಸರ ಮಾತಿಗೆ ಬೆದರಿ ತಗ್ಗಿದ ಯುವಕರು ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಕ್ಷಮೆ ಯಾಚಿಸಿದ್ದಾರೆ. ಬಳಿಕ ಬುದ್ದಿವಾದ ಹೇಳಿ ಬಟ್ಟೆಗಳನ್ನು ಕೊಟ್ಟಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post