ಕಲ್ಪ ಮೀಡಿಯಾ ಹೌಸ್ | ಶೃಂಗೇರಿ |
ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಸನ್ನಿಧಿಯಲ್ಲಿ ಮಾರ್ಚ್ 13ರಿಂದ 19ರವರೆಗೂ ಒಂದು ವಾರಗಳ ಕಾಲ ಶೃಂಗೇರಿ ಉತ್ಸವವನ್ನು #SringeriUtsava ಆಯೋಜಿಸಲಾಗಿದ್ದು, ಖ್ಯಾತನಾಮರಿಂದ ಸಂಗೀತ ಸುಧೆ ಹರಿಯಲಿದೆ.
ಸನಾತನ ಧರ್ಮ ಪ್ರಚಾರ, ರಕ್ಷಣೆಯೊಂದಿಗೆ ಭಾರತೀಯ ಸಂಸ್ಕೃತಿ #Indian_culture ಮತ್ತು ಪರಂಪರೆ, ಸಂಗೀತ ಕ್ಷೇತ್ರ ಸೇರಿದಂತೆ ಇವುಗಳ ಪೋಷಣೆಗಾಗಿ ಶ್ರೀಮಠ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ. ಇದರ ಭಾಗವಾಗಿ ಶ್ರೀಭಾರತಿ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಅನುಗ್ರಹದೊಂದಿಗೆ ಈ ಬಾರಿ ನಗರದ ನಾಗರಿಕರು ಪ್ರಥಮ ಬಾರಿಗೆ ಶೃಂಗೇರಿ ಉತ್ಸವವನ್ನು ಶ್ರೀಮಠದಲ್ಲಿ ಆಯೋಜಿಸಿದ್ದಾರೆ.
ಎಷ್ಟು ದಿನ ಕಾರ್ಯಕ್ರಮಗಳು ನಡೆಯಲಿವೆ?
ಮಾರ್ಚ್ 13 ರಿಂದ 19ನೆಯ ತಾರೀಕಿನವರೆಗೂ ಶೃಂಗೇರಿ #Sringeri ಉತ್ಸವ ನಡೆಯಲಿದ್ದು, ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?
- ಮಾರ್ಚ್ 13: ಖ್ಯಾತ ಗಾಯಕ, ವಿದ್ವಾನ್ ವಿಜಯಪ್ರಕಾಶ್ #VijayaPrakash ಅವರಿಂದ ಹಾಡುಗಾರಿಕೆ
- ಮಾರ್ಚ್ 14: ಅಸ್ತಿತ್ವಂ ಥಿಯೇಟರ್ ಫೌಂಡೇಶನ್ ಕಲಾವಿದರಿಂದ ಅದ್ವೈತ ಅನುಸಂಧಾನ-ಶ್ರೀಶಂಕರ ಭಗವತ್ಪಾದರ ಪ್ರಪ್ರಥಮ ರಂಗರೂಪಕ
- ಮಾರ್ಚ್ 15: ಖ್ಯಾತ ಗಾಯಕಿ, ವಿದೂಷಿ ಅನುರಾಧ ಭಟ್ #AnuradhaBhat ಆವರಿಂದ ಹಾಡುಗಾರಿಕೆ
- ಮಾರ್ಚ್ 16: ಖ್ಯಾತ ಗಾಯಕಿ, ಪದ್ಮಶ್ರೀ ಪುರಸ್ಕೃತ ಗಾಯಕಿ, ವಿದೂಷಿ ಅನುರಾಧಾ ಪೌಡ್ವಾಲ್ #Anuradha_Paudwal ಅವರಿಂದ ಹಾಡುಗಾರಿಕೆ
- ಮಾರ್ಚ್ 17: ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಬಾಪು ಪದ್ಮನಾಭ ಅವರಿಂದ ಕೊಳಲುವಾದನ- ನಾದ ಮತ್ತು ಭಾವ
- ಮಾರ್ಚ್ 18: ಅಂತಾರಾಷ್ಟ್ರೀಯ ಕಲಾವಿದ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಡಾ. ಎಲ್. ಸುಬ್ರಹ್ಮಣ್ಯಂ ಅವರಿಂದ ವಯೋಲಿನ್ ವಾದನ
- ಮಾರ್ಚ್ 19: ಹೆಮ್ಮೆಯ ಪ್ರಭಾತ ಕಲಾವಿದರಿಂದ ಶ್ರೀರಾಮ ಪ್ರತೀಕ್ಷ ನೃತ್ಯ ನಾಟಕ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post