ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಟಿಕ್ ಟಾಕ್ ಸೇರಿದಂತೆ ಚೀನಾದ 50ಕ್ಕೂ ಅಧಿಕ ಮೊಬೈಲ್ ಆಪ್ ಭಾರತದ ಭದ್ರತೆಗೆ ಧಕ್ಕೆ ತರುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಭದ್ರತಾ ಏಜೆನ್ಸಿಗಳು ಎಚ್ಚರಿಕೆ ನೀಡಿದ್ದು, ಟಿಕ್ ಟಾಕ್, ಹಲೋ, ಯುಸಿ ಬ್ರೋಸರ್ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮೊಬೈಲ್ ಆಪ್ ದೇಶದ ಭದ್ರತೆಗೆ ಧಕ್ಕೆ ತರುವ ಸಾಧ್ಯತೆ ದಟ್ಟವಾಗಿದ್ದು, ದೇಶದ ಮಹತ್ವದ ಹಾಗೂ ಗೌಪ್ಯ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಯಿದೆ ಎಂದಿದೆ.
ಚೀನಾದ ಈ ಮೊಬೈಲ್ ಆಪ್ ಕಂಪನಿಗಳು ಬಳಕೆದಾರರ ಡಾಟಾ ಕಳುವಾಗುವ ಕುರಿತಾಗಿನ ಆರೋಪವನ್ನು ತಳ್ಳಿ ಹಾಕಿವೆ. ಆದರೂ, ಮಾಹಿತಿ ಕಳುವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಭಾರತೀಯ ಭದ್ರತಾ ಏಜೆನ್ಸಿಗಳು ಬಲವಾಗಿ ದೇಶವನ್ನು ಎಚ್ಚರಿಸಿವೆ.
Get In Touch With Us info@kalpa.news Whatsapp: 9481252093















