ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ Shri Raghavendra Swamy ವಿಶ್ರಾಂತಿ ಗೃಹ ಐದನೇಯ ಮಂತ್ರಾಲಯ Manthralaya ಭರಮಸಾಗರದಲ್ಲಿ ಆ.31ರಿಂದ ಸೆ.2 ರವರೆಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು ಜರುಗಿತು.
ಆ.31ರಂದು ಶ್ರೀ ಗುರು ರಾಯರ ಆರಾಧನಾ ಕಳಸ ಸ್ಥಾಪನೆ, ಪೂರ್ವಾರಾಧನೆ ಪೂಜಾಕಲಾಪಗಳು, ಪಂಚಾಮೃತಾಬಿಷೇಕ, ಪ್ರಸಾದ ವಿತರಣೆ, ಸಂಜೆ ಸ್ಥಳೀಯ ದುರ್ಗಾಭಿಕಾ ಮಹಿಳಾ ಸದಸ್ಯರಿಂದ ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸೆ.1ರಂದು ಮಧ್ಯ ಆರಾಧನೆ ನಿಮಿತ್ತ ವಿಶೇಷ ಫಲ ಪಂಚಾಮೃತ ಅಭಿಷೇಕ, ರುದ್ದರಾಭಿಷೇಕ, ನೂತನ ವಸ್ರ್ರಾಧಾರಣೆ, ಗುರುಬಿಕ್ಷ, ಗುರು ಪಾದಕೆ ಪೂಜೆ, ಪುಷ್ಪ ಅಲಂಕಾರ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ. ಮಧ್ಯ ಆರಾಧನಾ ಪೂಜಾಕಲಾಪಗಳು, ಪ್ರಸಾದ ವಿತರಣೆ. ನೆಡೆಯಿತು. ಸಂಜೆ ಗುರುದರ್ಶನದ ಭಕ್ತರಿಂದ ಭಕ್ತಿ ಸಂಗೀತ ಮತ್ತು ಭಜನೆ ನಡೆಯಿತು.
2ರಂದು ಶನಿವಾರ , ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ತರ ಆರಾಧನೆ ವಿಶೇಷವಾಗಿ ಶ್ರೀ ರಾಯರ ಬೃಂದಾವನಕ್ಕೆ ರುದ್ರಾಭಿಷೇಕ ಮಹಿಳೆಯರಿಂದ ಸುಮಂಗಲಿ ಪೂಜೆ, ಅರಿಷಿಣ ಕುಂಕುಮ ಸಮರ್ಪಣೆ, ಶ್ರೀ ಸತ್ಯನಾರಾಯಣ ಪೂಜೆ, ಸರ್ವ ಸಮರೋಪನೋತ್ಸವ, ಶ್ರೀ ಭೂತರಾಜರಿಗೆ ಅಭಿಷೇಕ ಮತ್ತು ಅಲಂಕಾರ, ಪ್ರಸಾದ ವಿತರಣೆ ನೆರವೇರಿತು. ಸಂಜೆ ಭರಮಸಾಗರದ ಸಾಯಿ ಙಕ್ತ ಮಂಡಲಿಯ ಸದಸ್ಯರಿಂದ ಸಾಯಿ ಭಜನೆ ಕಾರ್ಯಕ್ರಮ ಭಕ್ತರಿಂದ ಭಕ್ತಿ ಗೀತೆಗಳು, ಗುರು ಭಜನೆ ಮತ್ತು ಮಂಗಳಾರತಿ ಲಾಲಿ ಸೇವೆಯನ್ನು ನೆರವೇರಿಸಲಾಯಿತು.
ಭರಮಸಾಗರದ ರಾಯರ ವಿಶ್ರಾಂತಿ ಗೃಹಕ್ಕೆ ಜಾತಿಬೇದವಿಲ್ಲದೆ ನಂಬಿ ಬಂದ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದಂತೆ ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ನವರು ಸಹ ಪ್ರತಿವರ್ಷದಂತೆ ಕಾರ್ಯಕ್ರಮದಲ್ಲಿ ಹಾಜರಾಗಿ ಆಶೀರ್ವಾದ ಪಡೆದರು.
ವರದಿ: ಮುರುಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post