ಕಲ್ಪ ಮೀಡಿಯಾ ಹೌಸ್ | ಭರಮಸಾಗರ |
ಚಿತ್ರದುರ್ಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ “ನಮ್ಮ ನಡೆ – ಜಾಗೃತಿ ಕಡೆ” ಎಂಬ ಘೋಷಣೆಯಡಿಯ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಯಿತು.
ಜುಲೈ 25 ಹಾಗೂ 26 ರಂದು ಭರಮಸಾಗರದಲ್ಲಿ ನಡೆದ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಸಿವಿಲ್ ನ್ಯಾಯಾಧೀಶರಾದ ವಿಜಯ್ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಂಜನ್ ಕುಮಾರ್ ಬಂಡಾರು (IPS) ಅವರ ನೇತೃತ್ವದಲ್ಲಿ ನಡೆಯಿತು. ಮಹಿಳಾ ಸುರಕ್ಷತೆ, ಸಂಚಾರಿ ಶಿಸ್ತು, ಬಾಲ್ಯ ವಿವಾಹ ತಡೆ, ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧ ಹಾಗೂ ಸೈಬರ್ ಅಪರಾಧಗಳಿಂದ ಎಚ್ಚರಿಕೆ ಮುಂತಾದ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಪೊಲೀಸ್ ಇಲಾಖೆ ಆಯುಧ ಮದ್ದುಗೊಂಡುಗಳು, ತಪಾಸಣಾ ಉಪಕರಣಗಳು, ಹಾಗೂ ಪೋಲೀಸ್ ಶ್ವಾನ ದಳದ ಕಾರ್ಯಕ್ಷಮತೆಯ ಪ್ರದರ್ಶನವನ್ನು ಸಾರ್ವಜನಿಕರ ಮುಂದೆ ಉಜ್ವಲವಾಗಿ ನೀಡಿತು.

ಕೊನೆಯ ದಿನ ಡಿವೈಎಸ್ಪಿ ಶ್ರೀ ದಿನಕರ್, ಮೈಕ್ -2 ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಈಶ್ವರ ನಾಯಕ್, ಸೈಬರ್ ಇನ್ಸ್ಪೆಕ್ಟರ್ ಶ್ರೀ ವೆಂಕಟೇಶ್, ಎಸ್.ಐ. ಮಂಜುನಾಥ್ (ಚಿತ್ರದುರ್ಗ ರೂರಲ್), ಭರಮಸಾಗರದ ಠಾಣಾಧಿಕಾರಿ ಪ್ರಸಾದ್ ಇವರುಗಳು ಸಮಾರೋಪ ಭಾಷಣ ನೀಡಿ, ಸಾರ್ವಜನಿಕ ಸಭೆಯಲ್ಲಿ ಜನಸಂಪರ್ಕ ಹೊಂದಿದರು.
ಸೈಬರ್ ಕ್ರೈಂ ವಿಭಾಗದ ಅಧಿಕಾರಿ ಶ್ರೀ ವೆಂಕಟೇಶ್ ಅವರು, ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡುತ್ತಾ, ಜನರು ಮೋಸಗಳಿಗೆ ಒಳಗಾಗುತ್ತಾರೆ ಮತ್ತು ಎಚ್ಚರಿಕೆ ಹೇಗೆ ವಹಿಸಬೇಕು ಎಂಬುದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಭರಮಸಾಗರ ಮತ್ತು ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರ ಜೊತೆ ಪೊಲೀಸ್ ಇಲಾಖೆ ಜನ ಸಂಪರ್ಕ ಸಭೆಯನ್ನ ಆಯೋಜಿಸಲಾಗಿತ್ತು ಈ ಸಭೆಯಲ್ಲಿ ಭ್ರಮಸಾಗರದ ಅನೇಕ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸುವುದರ ಮೂಲಕ ಅವುಗಳನ್ನ ಗಣನೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ಆಶ್ವಾಸನೆ ನೀಡಿತು.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post