ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಎರಡು ಬಾರಿ ಕೇಂದ್ರದಿಂದ ತಜ್ಞರ ತಂಡ ತಾಲೂಕು ರೈತರ ಜಮೀನುಗಳಿಗೆ ಭೇಟಿ ನೀಡಿ ಕೇಂದ್ರಕ್ಕೆ ಬೆಳೆ ನಷ್ಟದ ಬಗ್ಗೆ ಮಾಹಿತಿ ಕೊಡುತ್ತವೆ ಎಂದು ಭರವಸೆ ನೀಡಿ ಹೋದರು. ಆದರೆ ಇದರಿಂದ ರೈತರಿಗೆ ಯಾವುದೇ ಉಪಯೋಗವಾಗಲಿಲ್ಲ ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿ ವೀರಣ್ಣ ಹೇಳಿದರು.
ತಾಲೂಕಿನ ರೈತರಿಗೆ ಬೆಳೆ ವಿಮೆ, ಬೆಳೆ ನಷ್ಠ ಪರಿಹಾರ, ಈರುಳ್ಳಿ ನಷ್ಟ ಪರಿಹಾರ ಮತ್ತು ಬಗರ್ ಹುಕುಂ ಸಾಗುವಳಿ ಕೊಟ್ಟಿಲ್ಲದ ಕಾರಣ ರೈತರಿಂದ ತಾಲೂಕು ಮತ್ತಿಗೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ತಂಡ ಬಂದು ಹೋಗುವುದಕ್ಕೆ ಕೋಟಿಗಟ್ಟಲೆ ಹಣ ವ್ಯಚ್ಚವಾಯಿತೇ ವಿನಹ ರೈತರಿಗೆ ಯಾವ ಪರಿಹಾರವೂ ಸಿಕ್ಕಿಲ್ಲ. ತಾಲೂಕಿನಾದ್ಯಂತ ಸಾವಿರಾರು ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ರೈತರು ಸಾಲ ಸೂಲಮಾಡಿ ಬೆಳೆ ವಿಮೆ ಕಟ್ಟಿದ್ದಾರೆ. ಆದರೆ ಇದುವವರೆಗೂ ರೈತರಿಗೆ ವಿಮೆ ತಲುಪಿಲ್ಲ ಎಂದು ದೂರಿದರು.
ತಾಲೂಕಿನ ರೈತರು 16ರಿಂದ 20ರವರೆಗೆ ಬೆಳೆ ವಿಮೆ ಕಟ್ಟುತ್ತಾ ಬಂದಿದ್ದರೂ, ರೈತರಿಗೆ ಸರಿಯಾದ ವಿಮೆ ಕೊಟ್ಟಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ವಿಮೆ ಹಣ ಬಿಡುಗಡೆ ಮಾಡಬೇಕು. 2020ನೇ ಸಾಲಿನಲ್ಲಿ ಉಂಟಾದ ಅತಿವೃಷ್ಟಿಯಿಂದ ಶೇಂಗಾ ಬೆಳೆ ಸಂಪೂರ್ಣ ನಾಶವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಮೀಕ್ಷೆ ವರದಿಯ ಮಾಹಿತಿಯನ್ನು ರೈತರಿಗೆ ನೀಡಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ವ ಇಲಾಖೆ ಒಳಗಡೆ ರೈತರು ಕೊಟ್ಟಿರುವಂತಹ ಅರ್ಜಿ ವಿಳಂಬವಾಗುತ್ತಿದ್ದು, ಅದಕ್ಕೆ ದಿನಾಂಕವನ್ನು ನಿಗಧಿ ಮಾಡಲು ಆದೇಶ ಮಾಡಬೇಕು. ರೈತರ ಕೃಷಿ ಕಸುಬಿಗಾಗಿ ಸರ್ಕಾರಿ ಜಾಗದಲ್ಲಿ ಸಾಗುವಳಿ ಪತ್ರ ನೀಡಬೇಕು. 2020ರಲ್ಲಿ ಈರುಳ್ಳಿ ಭಿತ್ತನೆ ಮಾಡಿದ್ದು, ಮಳೆ ಹೆಚ್ಚಾಗಿ ಈರುಳ್ಳಿ ಬೆಳೆಯಲ್ಲಾ ಭೂಮಿಯಲ್ಲೆ ಸಂಪೂರ್ಣ ಕೊಳೆತುಹೋಗಿದೆ. ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಸರ್ವೆ ಮಾಡಿದ ಪ್ರಕಾರ ಪರಿಹಾರವನ್ನು ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್, ಕೃಷಿ ಸಹಾಯಕ ನಿರ್ದೇಶಕ ಡಾ.ಮೊಹನ್ ಕುಮಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ, ಪೋಲೀಸ್ ಇನ್ಸ್‌ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ, ರೈತಮುಖಂಡರಾದ ಚನ್ನಕೇಶವ, ಬಸವರಾಜ್, ಶಶಿಕುಮಾರ್, ತಿಪ್ಪೇಸ್ವಾಮಿ, ಆಸ್ವತ್ ರೆಡ್ಡಿ, ರಾಜಣ್ಣ, ನಾಗರಾಜಪ್ಪ, ವರವು ತಿಪ್ಪೇಸ್ವಾಮಿ, ಎರ್ರಿಸ್ವಾಮಿ, ರತ್ನಮ್ಮ, ಹನುಂತಪ್ಪ, ಕರಿಯಪ್ಪ, ಸುರೇಶ, ರಾಘವೇಂದ್ರ ಹಾಗೂ ರೈತ ಮುಖಂಡರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post