ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ದಂಡ ಹಾಕುವುದರ ಮೂಲಕ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಅರ್ಜನ್ ಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು.
ನಗರದ ಪೋಲೀಸ್ ಠಾಣೆ ಮುಂದಿನ ಮುಖ್ಯ ರಸ್ತೆಯಲ್ಲಿ ಸಂಚಾರಿ ನಿಯಮ ಪಾಲಿಸದ ಸವಾರರಿಗೆ ದಂಡ ವಸೂಲಿ ಮಾಡಿದ ಅವರು, ಬೈಕ್ ಸವಾರರು ರಸ್ತೆಗಳಿಯುವಾಗ ಹೆಲ್ಮೇಟ್ ದರಿಸಬೇಕು. ವಾಹನ ದಾಖಲಾತಿ, ಚಾಲನಾ ಪರವಾನಗಿ, ವಾಹನ ವಿಮೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ಹೊಂದಿರಬೇಕು ಎಂದು ತಿಳುವಳಿಕೆ ಹೇಳಿದರು.
ಕೆಲವರು ರಸ್ತೆ ನಿಯಮವನ್ನು ಪಾಲಿಸದೆ ಸಂಚರಿಸುತ್ತಾರೆ. ಇದರಿಂದ ನಷ್ಟ ಅನುಭವಿಸುವಬೇಕಾಗುತ್ತದೆ. ಬೈಕ್ ಸವಾರರು ಹೆಲ್ಮೆಟ್ ಧರಿಸುವುದರಿಂದ ಅಫಘಾತವಾದಾಗ ತಲೆಗೆ ಬಲವಾದ ಪೆಟ್ಟು ಬೀಳುವುದು ತಪ್ಪುತ್ತದೆ. ಹಾಗೂ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಹೇಳಿದರು.
ಪೋಲೀಸ್ ಇಲಾಖೆ ಮಾಡಿರುವ ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ವಾಹನ ಸವಾರರಿಗೆ ಸಹಕಾರಿಯಾಗುತ್ತದೆ. ಮತ್ತು ದಂಡ ಪಾವತಿಸುವ ಅವಕಾಶ ಇರುವುದಿಲ್ಲ. ಪೊಲೀಸರೂ ಸಹ ರೋಡಿಗಿಳಿದು ದಂಡ ವಸೂಲಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.
ಇಲಾಖೆ ಸಾಕಷ್ಟು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರೂ ಸಹ ವಾಹನ ಸವಾರರು ಸಂಚಾರಿ ನಿಯಮವನ್ನು ಮೀರಿ ದಂಡ ಕಟ್ಟುತ್ತಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಪೊಲೀಸ್ ಕಾನ್ಸ್ಟೇಬಲ್‌ಗಳಾದ ಓಬಣ್ಣ, ಶಂಕರಮೂರ್ತಿ, ಪರಶುರಾಮ್, ರಾಜು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post