ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಿಡಿಲು ಬಡಿದು 3 ಕುರಿಗಳು ಸಾವನ್ನಪ್ಪಿರವ ಘಟನೆ ಚಳ್ಳಕೆರೆ ತಾಲೂಕು ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನೋರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಊಲೆ ಪಾಲಯ್ಯ ಅವರಿಗೆ ಸೇರಿದ ಕುರಿಗಳಾಗಿದ್ದು, ಮನೆಯ ಮುಂದಿದ್ದ ಕುರಿಯ ಮಂದೆಯಲ್ಲಿ ಕುರಿಗಳಿಗೆ ಸಿಡಿಲು ಬಡಿದು ಕುರಿಗಳು ಸಾವನ್ನಪ್ಪಿವೆ. ಇದರಿಂದ ಊಲೆ ಪಾಲಯ್ಯ ಅವರಿಗೆ 20 ಸಾವಿರ ನಷ್ಟವಾಗಿದೆ. ವೇಳೆ ಮನೆಯ ಅಂಗಳದಲ್ಲಿ ಇದ್ದ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















