ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಅಂತು ಇಂತು ಗ್ರಾಮ ಪಂಚಾಯಿತಿ ಚುನಾವಣೆ ಸುಗಮವಾಗಿ ನಡೆದಿದೆ. ಚುನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಗಳ ಎದೆಯಲ್ಲು ನಡುಕು ಪ್ರಾರಂಭವಾಗಿದೆ.
ಡಿ.27ರಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ನಗರದ ಎಚ್‌ಪಿಪಿಸಿ ಕಾಲೇಜಿನ ಭದ್ರತಾ ಕೊಠಡಿಯಲ್ಲಿನ ಭದ್ರವಾಗಿ ಇಡಲಾಗಿದೆ. ಡಿ.30ರ ಬುಧವಾರ ಬೆಳಗ್ಗೆ 8 ರಿಂದ ಎಣಿಕೆ ಕಾರ್ಯ ಪ್ರಾರಂಭವಾಗಿಲಿದ್ದು, ಫಲಿತಾಂಶ ಹೊರ ಬೀಳಲಿದೆ.
ಇನ್ನು, ಫಲಿತಾಂಶದ ಬಗ್ಗೆ ಚರ್ಚೆಗಳು ಹಾಗೂ ಗೆಲುವಿನ ಬೆಟ್ಟಿಂಗ್’ಗಳು ಹಲವೆಡೆ ನಡೆಯುತ್ತಿವೆ.
ಪೋಲೀಸ್ ಸರ್ಪಗಾವಲಿನಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಕಾಲೇಜು ಸುತ್ತಲಿನ ಪ್ರದೇಶದಲ್ಲಿ ಪೋಲೀಸ್ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.
ಕಾಲೇಜಿನ 20 ಕೊಠಡಿಗಳು ಇದಕ್ಕಾಗಿ ಸಿದ್ದಗೊಂಡಿದ್ದು, 88 ಟೇಬಲ್’ನಲ್ಲಿ ತಲಾ ಮೂರು ಸಿಬ್ಬಂದಿ ಏಣಿಕೆ ಮಾಡಲಿದ್ದಾರೆ. ಒಟ್ಟು ಮೂರು ಸುತ್ತು ಏಣಿಕೆ ಕಾರ್ಯ ನಡೆಯಲಿದ್ದು, ಎಣಿಕೆ ಕಾರ್ಯದಲ್ಲಿ ಒಬ್ಬ ಏಜಂಟರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಚುನಾವಣೆ ಅಧಿಕಾರಿ ಮಧುಸೂದನ್ ಹಾಗೂ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post