ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಈ ಬಾರಿ ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ #Taralabalu Hunnime ವಿಶೇಷವಾಗಿರುತ್ತದೆ ಹಾಗೂ ಏತನೀರಾವರಿ ಯೋಜನೆ ವಿಶೇಷ ಆಕರ್ಷಣೆಯಾಗಿರುತ್ತದೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ #Dr. Shivamurthy Shivacharya Swamiji ಹೇಳಿದ್ದಾರೆ.
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ತರಳಬಾಳು ಹುಣ್ಣಿಮೆ ಸಮಿತಿ ರಚನೆ ಸಭೆಯಲ್ಲಿ ಅವರು ಮಾತನಾಡಿದರು.
ಕೆರೆ ಏತನೀರಾವರಿ ಹೆಚ್ಚಿನ ಆಕರ್ಷಣೆ: ಏತನೀರಾವರಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂಬ ತಪ್ಪು ಭಾವನೆಗೆ ವಿರುದ್ದವಾಗಿ ಯಶಸ್ವಿಯಾಗಿರುವ ಭರಮಸಾಗರ ಏತನೀರಾವರಿ ಯೋಜನೆ ಉದಾಹರಣೆಯಾಗಿದೆ. ಕಾರಣ ಇದು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ.
ಸಮಿತಿ ಮತ್ತು ಸಂಪನ್ಮೂಲ ಕ್ರೂಢೀಕರಣಕ್ಕಾಗಿ ತುರ್ತು ಸಭೆ
ತರಳಬಾಳು ಹುಣ್ಣಿಮೆ ನಾಡ ಹಬ್ಬವಾಗಿ ಖ್ಯಾತವಾಗಿದೆ ಕಾರಣ ತರಳಬಾಳು ಹುಣ್ಣಿಮೆಯಲ್ಲಿ ಸಂಘರ್ಷಕ್ಕೆಡೆಮಾಡದಂತೆ ಸಮನ್ವಯತೆಯಿಂದ ಎಲ್ಲರೂ ಕೆಲಸ ನಿರ್ವಹಿಸಬೇಕು ಡಿ.21 ರಿಂದ ಉತ್ತರ ಭಾರತದಲ್ಲಿಯ ಕಾರ್ಯಕ್ರಮಗಳಿಗೆ ತೆರಳಬೇಕಾಗಿರುವುದರಿಂದ ವಿವಿದ ಸಮಿತಿಗಳ ರಚನೆ ಮತ್ತು ಇತರ ಸಂಪನ್ಮೂಲ ಕ್ರೂಢೀಕರಣದ ಉದ್ದೇಶದಿಂದ ಈ ಸಭೆ ತುರ್ತಾಗಿ ಕರೆಯಲಾಗಿದೆ.
ಪರಿಸರದ ಕಾಳಜಿ, ಪ್ಲೆಕ್ಸ್ ಬ್ಯಾನರ್ ಗೆ ಕಡಿವಾಣ ಈ ಬಾರಿಯ ತರಳಬಾಳು ಹುಣ್ಣಿಮೆಯಲ್ಲಿ ಪ್ಲೆಕ್ಸ್ ಗಳನ್ನು ಸಿಡಿಮದ್ದುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಸತ್ಕಾರ್ಯಗಳಿಗೆ ಬಳಸಬಹುದು ಹಾಗೂ ಉಚ್ಚ ನ್ಯಾಯಾಲಯದ ಆದೇಶವನ್ನು ಸಹ ಪಾಲಿಸುವುದು ನಮ್ಮ ಧರ್ಮವಾಗಿದೆ.
ಪ್ರತಿದಿನ ಒಂದೊಂದು ವಿಷಯದ ಮೇಲೆ ಉಪನ್ಯಾಸ ಸಂವಾದ:
ಈ ಬಾರಿಯ ತರಳಬಾಳು ಹುಣ್ಣಿಮೆಯಲ್ಲಿ ಇನ್ನೊಂದು ವಿಶೇಷವೆಂದರೆ ಪ್ರತೀ ದಿನವೂ ಒಂದೊಂದು ವಿಷಯದ ಮೇಲೆ ತಜ್ಞರಿಂದ ಉಪನ್ಯಾಸ ಏರ್ಪಡಿಸಲಾಗವುದು, ಶಿಕ್ಷಣ, ಕಲೆ ಸಂಸ್ಕೃತಿ, ಮಹಿಳೆ ಮತ್ತು ಸಮಾಜ, ರಾಜಕಾರಣ, ಶರಣಸಾಹಿತ್ಯ, ನ್ಯಾಯಾಲಯ, ಆರೋಗ್ಯ, ಕೃಷಿ ಮತ್ತು ಜಲಸಂರಕ್ಷಣೆ ನಂತರ ಕೊನೆಯ ದಿನ ಹುಣ್ಣಿಮೆ ಕಾರ್ಯಕ್ರಮ ನಡೆಯುವುದು ಜೊತೆಗೆ ಕೆಲಸ ವಿಷಯಗಳ ಮೇಲೆ ಸಂವಾದವನ್ನು ಸಹ ಏರ್ಪಡಿಸಲಾಗುವುದು.ನ್ಯಾಯಾಲಯ ಮತ್ತು ಸಮಾಜಕ್ಕೆ ಸಂಬಂದಿಸಿದಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತ್ತೋಷಕುಮಾರ್ ಹೆಗ್ಡೆ ಹಾಗೂ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ರು ಉಪನ್ಯಾಸ ನೀಡಲಿರುವರು.
ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ :
ಎಲ್ಲಾ ಕಾರ್ಯಕ್ರಮ ನಡೆಸಲು ಸಂಪನ್ಮೂಲ ಅಗತ್ಯ ಅದಕ್ಕಾಗಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲು ಹೆಸರುಗಳನ್ನು ಕ್ರೂಢೀಕರಿಸಲಾಗಿದೆ. ನಿಧಿ ಸಂಗ್ರಹಣೆ ಸಮಿತಿ ಇರುವುದಿಲ್ಲ ತಮ್ಮ ಶಕ್ತಿ ಅನುಸಾರ ದೇಣಿಗೆ ನೀಡಬಹುದು. ತರಳಬಾಳು ಹುಣ್ಣಿಮೆಯಲ್ಲಿ ವೆಚ್ಚವಾಗಿ ಉಳಿದ ಹಣದ 50 ಭಾಗ ಭರಮಸಾಗರದ ಕೆರೆ ಅಭಿವೃದ್ದಿ ಮತ್ತು ಉಳಿದ 50 ಭಾಗ ಹಣವನ್ನು ವಿದ್ಯಾರ್ಥಿಗಳ ಊಟ ವಸತಿಗೆ. ಮೀಸಲಿರಿಸಲಾಗುವುದು ಕೆರೆ ಸುತ್ತಲೂ ವಾಯುವಿಹಾರಕ್ಕಾರಿ ರಸ್ತೆ, ಉದ್ಯಾನವನ, ವಿದ್ಯುತ್ ದೀಪ, ವಿಶ್ರಾಂತಿ ಆಸನಗಳಿಗಾಗಿ ಬಳಸಲಾಗುವುದು, ಈ ವೆಚ್ಚವನ್ನು ಸರ್ಕಾರ ಭರಿಸಿದರೆ ಆ ಹಣವನ್ನು ಆಪಧನ ಎಂದು ನಿರ್ವಹಣೆ ವೆಚ್ಚಕ್ಕೆ ಇಡಲಾಗುವುದು ಇನ್ನುಳಿದ ಅರ್ಧ ಹಣವನ್ನು ಸಿರಿಗೆರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಊಟ ವಸತಿ ಮೀಸಲಿರಿಸಲಾಗುವುದು. ಕಾರಣ ಕಾರ್ಯಕ್ರಮದ ವೆಚ್ಚ ಮಿತವಾಗಿರಬೇಕು ಎಂದು ಸೂಚಿಸಿದರು.
ರೂ 1 ಕೋಟಿ 26 ಲಕ್ಷ ದೇಣಿಗೆ ವಾಗ್ದಾನ ಸ್ಥಳದಲ್ಲಿ ಸೇರಿದ್ದ ಭರಮಸಾಗರ ಸುತ್ತಮುತ್ತಲ ಹಾಗೂ ಚಿತ್ರದುರ್ಗ ಹೊಳಲ್ಕೆರೆ ಮುಖಂಡರುಗಳು ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಒಟ್ಟು ರೂ 1 ಕೋಟಿ 26 ಲಕ್ಷ ದೇಣಿಗೆಯ ವಾದ್ಗಾನ ಮಾಡಿದರು.
ವೇದಿಕೆ ನಿರ್ಮಾಣ ಕಾಮಗಾರಿ ತಯಾರಿ: ಈಗಾಗಲೇ ಮಠದ ಇಂಜಿನೀಯರ್ ರವಿ ಸ್ಥಳ ಪರಿಶೀಲನೆ ಮಾಡಿದ್ದು ನಕ್ಷೆ ಪ್ರಕಾರ ವೇದಿಕೆ ಸ್ಥಳ ಕಾಮಗಾರಿ ಆರಂಭವಾಗಿದೆ ಇದಕ್ಕಾಗಿ ಸ್ಥಳೀಯ ಮಟ್ಟದ ಮುಖಂಡರ ಸಮಿತಿ ರಚಿಸಲಾಗಿದೆ.
ವೇದಿಕೆ ನಿರ್ಮಾಣ ಸಮಿತಿಗೆ ಎಸ್ ಎಂ ಎಲ್ ತಿಪ್ಪೇಸ್ವಾಮಿ ಡಿ.ಎಸ್.ಪ್ರವೀಣ್, ಸಿ.ಟಿ.ಮಹಂತೇಶ್, ಶೈಲೇಶ್ ಕುಮಾರ್, ಕಲ್ಲೇಶ್, ನಿರಂಜನ್, ತುರುವನೂರು ಮಲ್ಲಣ್ಣ, ಕೋಗುಂಡೆ ಮಂಜುನಾಥ್, ಸಾಮಿಲ್ ಶಿವಣ್ಣ, ಎಮ್ಮೇಹಟ್ಟಿ ರುದ್ರೇಶ್, ಪ್ರಭು, ಷಮೀಂಪಾಷಾ, ಶಶಿಪಾಟೀಲ್, ತೀರ್ಥಪ್ಪ, ಕೃಷ್ಣಮೂರ್ತಿ ಯವರನ್ನು ಆಯ್ಕೆ ಮಾಡಲಾಯಿತು.
ಶಾಸಕರಾದ ಡಾ.ಎಂ.ಚಂದ್ರಪ್ಪ, ಜಗಳೂರು ಶಾಸಕ ದೇವೇಂದ್ರಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಹೋಬಳಿಯ ಮುಖಂಡರು ಉಪಸ್ಥಿತರಿದ್ದರು.
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಗುರುವಾರ ಸಂಜೆ ನಡೆದ ಭರಮಸಾಗರ ತರಳಬಾಳು ಹುಣ್ಣಿಮೆ ಪೂರ್ವಭಾವಿ ಸಭೆಯಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಮಾತನಾಡಿದರು. ಶಾಸಕರಾದ ಡಾ.ಎಂ.ಚಂದ್ರಪ್ಪ, ದೇವೇಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಎಸ್ ಎಂ ಎಲ್ ತಿಪ್ಪೇಸ್ವಾಮಿ, ಶಶಿಪಾಟೀಲ್, ಸಿರಿಗೆರೆ ನಾಗರಾಜ್, ಸಾಮಿಲ್ ಶಿವಣ್ಣ, ಡಿ.ಎಸ್.ಪ್ರವೀಣ್, ತೀರ್ಥಪ್ಪ, ಕೋಗುಂಡೆ ದ್ಯಾಮಣ್ಣ, ಸಿ.ಟಿ.ಮಹಂತೇಶ್, ಶೈಲೇಶ್ ಕುಮಾರ್, ಕಲ್ಲೇಶ್, ನಿರಂಜನ್, ತುರುವನೂರು ಮಲ್ಲಣ್ಣ, ಕೋಗುಂಡೆ ಮಂಜುನಾಥ್, ಎಮ್ಮೇಹಟ್ಟಿ ರುದ್ರೇಶ್, ಪ್ರಭು, ಷಮೀಂಪಾಷಾ, ಶಶಿಪಾಟೀಲ್, ಶಾಂತಾ ಅಶೋಕ್ ಇದ್ದರು.
2 ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಬರುವ ನಿರೀಕ್ಷೆ
- ಮುಖ್ಯವಾಗಿ ತರಳುಭಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಬರುವ ಕಾರಣ ಸುರಕ್ಷತಾ ದೃಷ್ಠಿಯಿಂದ ಸುಮಾರು 900 ಎಕರೆ ಜಾಗದಲ್ಲಿ ತುಂಬಿ ತುಳುಕುತ್ತಿರುವ ಚಿತ್ರದುರ್ಗ ಜಿಲ್ಲೆಯ ಹೆಸರಾಂತ ಬಿಚ್ಚುಗತ್ತಿ ಭರಮಣ್ಣ ನಾಯಕ ರೈತರಿಗಾಗಿ ಕಟ್ಟಿಸಿರುವ ಪುರಾತನ ಭರಮಸಾಗರದ ಭರಮಣ್ಣ ನಾಯಕರು ಕಟ್ಟಿಸಿ ಕೆರೆ ಏರಿಯಲ್ಲಿ ಈಗಾಗಲೆ ಎರಡು ಸಾವು ಸಂಬವಿಸಿದೆ ಸುರಕ್ಷತೆಗಾಗಿ ಕಾರ್ಯಕ್ರಮದ ಮುಂಚೆ ಕೆರೆಯ ಏರಿಯ ಸುತ್ತ ತಡೆ ಗೋಡೆ ನಿರ್ಮಣ ಮಾಡಬೇಕಾಗಿದೆ. ಕೆರೆ ಒತ್ತುವರಿ ತಡೆಯುವುದು ಮತ್ತು ತೆರವುಗೊಳಿಸುವುದು. ಗಡಿ ಕಂಬ ಹಾಕಿ ಸುತ್ತಲೂ ಬೇಲಿ ನಿರ್ಮಿಸುಬೇಕಾಗಿದೆ.
- ಸಂಬಂಧಪಟ್ಟ ಇಲಾಖೆ, ಸ್ಥಳೀಯ ಸಂಸ್ಥೆ ಇಲ್ಲವೇ ಅಭಿವೃದ್ಧಿ ಪ್ರಾಧಿಕಾರಗಳ ನೆರವಿನೊಂದಿಗೆ ಕೆರೆಗಳನ್ನು ಸಂರಕ್ಷಣೆ ಮಾಡಿ ಜಲ ಮರುಪೂರಣಗೊಳಿಸಲು ಅಭಿವೃದ್ಧಿಪಡಿಸುವ ಕಾರ್ಯ ಹಾಗೆಯೇ ಉಳಿದಿದೆ.
- ಕೆರೆಗಳ ಪರಿಸರ ಹಾನಿ ಕುರಿತು ಅಧ್ಯಯನ ಕೈಗೊಳ್ಳುವುದು.
- ಜಲಾನಯನ ಇಲಾಖೆ ಸಹಾಯದಿಂದ ಕೆರೆಗಳು ಮತ್ತು ಸುತ್ತಲಿನ ಪ್ರದೇಶದ ನಕ್ಷೆ ತಯಾರಿಸುವುದು ಮತ್ತು ಅಂಕಿ ಅಂಶ ಸಂಗ್ರಹಿಸುವುದು.
- ಕೆರೆಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವುದು, ಅಂತರ್ಜಲ ಮಟ್ಟ ವೃದ್ಧಿಸಲು ಕ್ರಮಕೈಗೊಳ್ಳುವುದು.
- ವಿಷಕಾರಿ, ರಾಸಾಯನಿಕಯುಕ್ತ ಕೊಳಚೆ ನೀರು ಕೆರೆಗೆ ಹರಿಯದಂತೆ ತಡೆಯುವುದು. ಜಲ ಸಸ್ಯಗಳು, ಪಕ್ಷಿಗಳು ಮತ್ತು ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವುದು.
- ಕೆರೆ ಏರಿಯ ಮಣ್ಣಿನ ಸಂರಕ್ಷಣೆ ಮಾಡಲು ಕೆರೆ ಸುತ್ತಲಿನ ಜಾಗದಲ್ಲಿ ಅರಣ್ಯೀಕರಣಗೊಳಿಸುವುದು.
- ಕೆರೆ ನೀರಿನ ಗುಣಮಟ್ಟ ನಿರ್ವಹಣೆ ಮತ್ತು ಸುಧಾರಣೆಗೆ ಕ್ರಮ ತೆಗೆದುಕೊಳ್ಳುವುದು. ಗೃಹ ಮತ್ತು ಕಾರ್ಖಾನೆಗಳ ನೀರು ಕೆರೆ ಸೇರದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು.
- ಕೆರೆಗಳ ಸಂರಕ್ಷಣೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಸಮುದಾಯ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಪ್ರೋತ್ಸಾಹಿಸುವುದು.
- ದೋಣಿ ವಿಹಾರ ಪ್ರಾರಂಬಿಸಿ ಸ್ಥಳೀಯರಿಗೆ ದುಡಿಮೆಗೆ ಅವಕಾಶ ಮಾಡಬೇಕಾಗಿದೆ.
- ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಒತ್ತನ್ನು ನೀಡಿ ಈ ಜಾಗವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಜನರ ಆಕರ್ಷಣೆ ಮಾಡುವುದು.
- ಬಹಳ ಮುಖ್ಯ ಎಂದರೆ ಈ ಕೆರೆ ಕಟ್ಟಿಸಿ ಮಾಡಿದ ಬಿಚ್ಚುಗತ್ತಿ ಭರಮಣ್ಣನ ನಾಯಕನ ಕಂಚಿನ ವಿಗ್ರಹವನ್ನು ಕೆರೆಯ ಏರಿ ಅಥವಾ ಸರ್ಕಲ್ ನಲ್ಲಿ ಮಾಡಿಸಿ ಶ್ರೀ ಶ್ರೀ ಸಿರಿಗೆರೆಯ ಗುರುಗಳ ಕೈಯಿಂದ ಅನಾವರಣ ಮಾಡಿಸುವುದು.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post