ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಿರಿಯೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರಕ್ಕೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಸಮರ್ಪಣೆ ಆಗಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಅಭಿಯಾನದ ಮುಕ್ತಾಯದ ಅಂಗವಾಗಿ ನಗರದ ಸತ್ಯ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ತಮಗೆ ಬರುವ ಶಾಸಕರ ಸಂಬಳದ ಹಣದಲ್ಲಿ ಐದು ಲಕ್ಷ ಮೊತ್ತದ ಚೆಕ್ ನೀಡಿ ಅವರು ಮಾತನಾಡಿದರು.
ಕೋವಿಡ್-19 ಪರಿಣಾಮ ಲಾಕ್‌ಡೌನ್ ಜಾರಿಯಾಗಿ ನಾಗರೀಕರು ಜೀವನೋಪಾಯಕ್ಕೆ ಕಷ್ಟಪಡುವ ಸ್ಥಿತಿಯಲ್ಲಿದ್ದರೂ ಅಯೋಧ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮ ಶಕ್ತಿ ಮೀರಿ ದೇಣಿಗೆ ನೀಡಿರುವರು ಎಂದರು.
ದೇಶದಾದ್ಯಂತ ನಿರೀಕ್ಷೆಗೂ ಮೀರಿ ಜನರು, ಜಾತಿ-ಧರ್ಮ, ಪಕ್ಷ ಭೇದ ಮರೆತು ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ, ಅಯೋಧ್ಯೆಯಲ್ಲಿನ ರಾಮ ಮಂದಿರ ದೇಶದ ಜನರ ನಿರೀಕ್ಷೆಯಂತೆ ರಾಷ್ಟ್ರ ಮಂದಿರವಾಗಿ ತಲೆ ಎತ್ತಿ ನಿಲ್ಲಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಅಭಿಯಾನದ ಹಿರಿಯ ಮುಖಂಡ ಎಂ.ಎಸ್. ರಾಘವೇಂದ್ರ ಮಾತನಾಡಿ, ತಾಲೂಕಿನಾದ್ಯಂತ ನಡೆದ ಅಭಿಯಾನದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಹತ್ತು, ನೂರು, ಸಾವಿರಗಳಂತೆ ಪ್ರತಿ ಮನೆಯಿಂದಲೂ ಸ್ವಇಚ್ಛೆಯಿಂದ ದೇಣಿಗೆ ನೀಡಲಾಗಿದೆ ಎಂದು ಹೇಳಿದರು.
ಈ ಅಭಿಯಾನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಜೊತೆಗೆ, ಮಂದಿರ ನಿರ್ಮಾಣದ ಹಾದಿ ಸಾಗಿಬಂದ ವಿವರಗಳನ್ನು ಮನೆ ಮನೆಗೂ ಕರಪತ್ರ ನೀಡುವುದರ ಮೂಲಕ ತಿಳಿಸಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಭಿಯಾನದ ಕಾರ್ಯಕರ್ತರಾದ ಕೇಶವ ಮೂರ್ತಿ, ಎ. ರಾಘವೇಂದ್ರ, ಎಂ.ವಿ.ಹರ್ಷ, ಹೆಚ್. ಕಿರಣ್ ಕುಮಾರ್, ಹೆಚ್. ವೆಂಕಟೇಶ್, ಚಂದ್ರಶೇಖರ್, ನಗರಸಭೆ ಸದಸ್ಯರಾದ ಮಹೇಶ್ ಪಲ್ಲವ್, ಬಾಲಕೃಷ್ಣ, ಸರವಣ, ಮುಖಂಡರಾದ ಎ. ನಾಗೇಶ್, ಜಿರಂಜೀವಿ, ಓಂಕಾರ್, ಕುಮಾರ್, ನಿರಂಜನ್ ಮೂರ್ತಿ, ಗುರು, ಹರಿ ಮತ್ತಿತರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post