ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಗ್ರಾಪಂ ಚುನಾವಣಾ ಎಣಿಕೆಯ ಸ್ಥಳದಲ್ಲಿ ಜನಸಾಗರ, ಗೆದ್ದವರಿಗೆ ಹೂಹಾರ, ಸೋತವರು ಸುಮ್ಮನೇ ಮನೆ ಕಡೆ ಮುಖ ಮಾಡಿದ್ದು ಸಾಮಾನ್ಯವಾಗಿತ್ತು.
ಚಳ್ಳಕೆರೆ-ಚಿತ್ರದುರ್ಗ ಮಾರ್ಗದ ಮುಖ್ಯರಸ್ತೆಯಲ್ಲಿನ ಎಚ್’ಪಿಪಿಸಿ ಕಾಲೇಜು ಎದುರು ಬಿಸಿಲನ್ನೂ ಲೆಕ್ಕಿಸದೇ ಕುಳಿತು ತಮ್ಮ ವ್ಯಾಪ್ತಿಯ ಫಲಿತಾಂಶ ತಿಳಿಯಲು ಮಹಿಳೆಯರುಮ ಕಾತುರರಾಗಿ ಕುಳಿತಿದ್ದರು.

ತಾಲೂಕಿನ 40 ಗ್ರಾಪಂ ಕೇಂದ್ರಗಳ 300 ಕ್ಕೂ ಹೆಚ್ಚು ಹಳ್ಳಿಗಳ ಜನರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಫಲಿತಾಂಶ ತಿಳಿಯಲು ಕಾತುರದಿಂದ ಟೆಂಪೋ, ಟ್ರ್ಯಾಕ್ಸಿ, ಲಘುವಾಹನಗಳಲ್ಲಿ ಗುಂಪು ಗುಂಪಾಗಿ ಬಂದು ಎಣಿಕೆ ಕಾರ್ಯ ನಡೆಯುತ್ತಿದ್ದ ಸರ್ಕಾರಿ ಡಿಗ್ರಿ ಕಾಲೇಜು ಎದುರಿನ ಮುಖ್ಯರಸ್ತೆಯ ಪಾದಚಾರಿ ರಸ್ತೆಯ ಮೇಲೆ ಕುಳಿತು ಎಣಿಕೆಯ ಸ್ಥಳದಲ್ಲಿ ತಾಲೂಕು ಆಡಳಿತ ಕ್ಷಣ ಕ್ಷಣಕ್ಕೂ ಮೈಕ್‌ನಲ್ಲಿ ನೀಡುತ್ತಿದ್ದ ಫಲಿತಾಂಶಕ್ಕೆ ಪ್ರತಿಕ್ರಿಯಿಸಿದ್ದು ಕೇಕೆ, ಸಿಳ್ಳೆ, ಕೂಗುಗಳು ಇದನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು ಹೇಳಿ ಹೇಳಿ ಕೊನೆಗೆ ಸುಮ್ಮನಾದರು.

ತಾಲೂಕಿನ 40 ಗ್ರಾಪಂ ನ ಶೇ 50 ರಷ್ಟು ಎಣಿಕೆ ಕಾರ್ಯ ಸಂಜೆ ಆರಾದರೂ ಮುಗಿದಿರಲಿಲ್ಲ ರಾತ್ರಿಯವರೆಗೂ ಎಣಿಕೆ ಕಾರ್ಯ ಪ್ರಗತಿಯಲ್ಲಿತ್ತು.

(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post