ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಸರ್ವೋಚ್ಚ, ಉಚ್ಛ ಹಾಗೂ ಕೆಳ ಹಂತದ ನ್ಯಾಯಾಲಯ ಹಾಗೂ ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಲಿ. ಕಾನೂನಿನ ನೆರವಿಂದ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಒದಗಿಸಬಹದು ಎಂಬುದರ ಚಿಂತನೆ ನಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹೇಳಿದರು.
ಬುಧವಾರ ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಮಹಾವಿದ್ಯಾಲಯದ ಸುವರ್ಣ ಸಮಾರಂಭ ಹಾಗೂ ಕಾನೂನು ಸೌಧ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಬೇಕು. ವಕೀಲರು ಮಾನವೀಯತೆ ಮರೆಯಬಾರದು. ಪ್ರಾಕೃತಿಕ ನ್ಯಾಯ ಹಾಗೂ ಮಾನವ ರಚಿತ ಕಾನೂನುಗಳು ಭಿನ್ನವಾಗಿವೆ. ಪ್ರಾಕೃತಿಕ ನ್ಯಾಯ, ಸತ್ಯ, ಧರ್ಮ, ಪರೋಪಕಾರದಿಂದ ಲಭಿಸುವ ಪುಣ್ಯ ಪ್ರಾಪ್ತಿಯ ಬಗ್ಗೆ ತಿಳಿಸುತ್ತದೆ. ಆದರೆ ಮಾನವ ನಿರ್ಮಿತ ಕಾನೂನು ಶಿಕ್ಷಾರ್ಹ ನೀತಿ ಹೊಂದಿದೆ. ಕಾನೂನು ಮೀರಿದರೆ ದಂಡ ವಿಧಿಸಲಾಗುತ್ತದೆ. ಭಾರತಕ್ಕೆ ಭವ್ಯ ಚರಿತ್ರೆ ಇದೆ. ಆದರೆ ಇಂದು ಉತ್ತಮ ಚಾರಿತ್ಯ ಹೊಂದಿರುವ ಜನರು ಬೇಕಾಗಿದೆ. ಭಾರತದಲ್ಲಿ ನೀತಿಗಳ ಬೋದಿಸುವ ಆಚಾರ್ಯರಿದ್ದಾರೆ. ಆದರೆ ನೀತಿಗಳ ಆಚರಣೆಯಾಗಬೇಕು ಎಂದರು.

Also read: ಗಮನಿಸಿ! ನ.24ರಂದು ಸೊರಬ, ಶಿಗ್ಗಾ ಗ್ರಾಪಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಸರಸ್ವತಿ ವಿದ್ಯಾಸ್ಥಂಸ್ಥೆ ಮಧ್ಯ ಕರ್ನಾಟಕದಲ್ಲಿ ಜನರಿಗೆ ಕಾನೂನು ನೆರವು ಲಭಿಸುವ ನಿಟ್ಟಿನಲ್ಲಿ ಉತ್ತಮ ವಕೀಲರನ್ನು ರೂಪಿಸಿದೆ.ಸ್ವಾತಂತ್ರ್ಯ ಹಾಗೂ ರಾಜ್ಯ ಏಕೀಕರಣದಲ್ಲಿ ವಕೀಲರ ಪಾತ್ರ ದೊಡ್ಡದಿದೆ. ಬ್ಯಾರಿಷ್ಟರ್ ಪದವಿ ಪಡೆದ ಮಹನೀಯರು ಸ್ವಾತಂತ್ರ್ಯ ಸಮಯದಲ್ಲಿ ಕಾನೂನು ರೂಪಿಸುವ ಸ್ಥಾನದಲ್ಲಿದ್ದರು. ಕಾಲಕ್ರಮೇಣ ಈ ಸಂಖ್ಯೆ ಇಳಿಮುಖವಾಗಿದೆ. ಇಂದು ಶೇ.25ಕ್ಕಿಂತ ಕಡಿಮೆ ವಕೀಲರು ರಾಜಕಾರಣದಲ್ಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಭೈರತಿ ಬಸವಾರಾಜ, ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಹಾಗೂ ಶಾಸಕ ಎ.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ,ವಿಧಾನ ಪರಿಷತ್ ಶಾಸಕ ರವಿಕುಮಾರ್, ಕೆ.ಎಸ್.ನವೀನ್, ನಗರ ಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಹುಬ್ಬಳ್ಳಿ ಕಾನೂನು ವಿ.ವಿ. ಉಪಕುಲಪತಿ ಡಾ.ಸಿ.ಬಸವರಾಜು ಸರಸ್ವತಿ ಕಾನೂನು ಕಾಲೇಜು ಮುಖ್ಯಸ್ಥ ಹೆಚ್. ಹನುಮಂತಪ್ಪ, ಜಿ.ಪಂ.ಸಿಇಓ ಎಂ.ಎಸ್. ದಿವಾಕರ್, ಅಪರಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶರಾಮ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post