ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕೃಷಿ ಇಲಾಖೆಯ ಮೂಲಕ ರೈತರಿಗೆ ಹಲವಾರು ಸೌಲಭ್ಯ ಹಾಗೂ ಯೋಜನೆಗಳನ್ನು ಕಲ್ಪಿಸಲಾಗಿದ್ದು ಕೃಷಿ ಇಲಾಖೆಯ ಅಧಿಕಾರಿಗಳು ರೈತರಗೆ ಸಮರ್ಕವಾಗಿ ಮಾಹಿತಿ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ ಬಾಬು ಹೇಳಿದರು.
ನಗರದ ಕೃಷಿ ಇಲಾಖೆಗೆ ಭೇಟಿ ನೀಡಿ ಅವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಯಲು ನಾಡು ಬರದ ನಾಡು ಎಂದು ಹೆಸರುವಾಸಿಯಾದ ಚಳ್ಳಕೆರೆ ತಾಲೂಕು ಸತತ ಬರಗಾಲದಿಂದ ಬಳಲಿ ಹೋಗಿದ್ದು ಮುಂಗಾರು ಈ ಬಾರಿ
ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಆರಂಭದಲ್ಲಿ ಉತ್ತಮ ಬೆಳೆ ಬಂದಿದೆ. ಆದರೆ ಇತ್ತೀಚೆಗೆ ಮಳೆ ಹೆಚ್ಚಾಗಿ ಬೆಳೆಯಲಾಗಿದ್ದ ಈರುಳ್ಳಿ, ಶೇಂಗಾ ಸಂಪೂರ್ಣ ನಾಶವಾಗಿದೆ. ಅಲ್ಪ ಬೆಳೆಯನ್ನು ರೈತರು ಬೆಳೆ ಕಟಾವ್ ಮಾಡಿ ಉಳಿದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರಿಗೆ ಮುಖ್ಯವಾಗಿ ಟಾಡಪಾಲ್’ಗಳು ಬೇಕಾಗುತ್ತವೆ. ಇಲಾಖೆಯಿಂದ ಮೊದಲು ಟಾಡಪಾಲ್ ವಿತರಿಸಿ ಎಂದರು.
ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಿ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡಿ, ಸಾಲದ ಬಾಧೆಯಿಂದ ಮೃತಪಟ್ಟಿದ್ದ ಇಬ್ಬರು ರೈತರಿಗೆ ಕೃಷಿ ಇಲಾಖೆಯಿಂದ ಪರಿಹಾರ ಸಿಗುವಂತೆ ಮಾಡಿ ಎಂದರು.
ಚಳ್ಳಕೆರೆ ಕೃಷಿ ಸಹಾಯಕ ನಿರ್ದೇಶಕ ಡಾ. ಮೋಹನ್ ಕುಮಾರ್ ಮಾತನಾಡಿ, ತಾಲೂಕಿನ ಎಲ್ಲಾ ರೈತರಿಗೂ ಅನುಕೂಲ ಮಾಡಿಕೊಡಲಾಗಿದೆ, ಈಗಾಗಲೇ ಬೆಳೆ ಸಮೀಕ್ಷೆ ಶೇ.80ರಷ್ಟು ಮಾಡಲಾಗಿದೆ, ಕಳೆದ ವರ್ಷ ಬೆಳೆ ವಿಮೆ ಮಾಡಿಸಿದವರಿಗೆ ಎಲ್ಲಾರಿಗೂ ತಲುಪುವಂತೆ ಕಂಪನಿಗಳಿಗೆ ಮಾಹಿತಿ ನೀಡಲಾಗಿದೆ. ತ್ವರಿತವಾಗಿ ಟಾಡಪಾಲ್‌ಗಳನ್ನು ವಿತರಿಸಲಾಗುವುದು ಎಂದರು.
ಈ ಸಮಯದಲ್ಲಿ ಜಿಲ್ಲಾ ಕೃಷಿ ನಿರ್ದೇಶಕ ಪ್ರಭಾಕರ್, ತಾಲೂಕು ಕೃಷಿ ಅಧಿಕಾರಿ ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆಪ್ತ ಕಾರ್ಯದರ್ಶಿ ಲೋಕೇಶ್, ಹಾಗೂ ರೈತರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post